Datasets:
ArXiv:
License:
\id 1TH | |
\ide UTF-8 | |
\rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License | |
\h 1 ಥೆಸಲೋನಿಕದವರಿಗೆ | |
\toc1 1 ಥೆಸಲೋನಿಕದವರಿಗೆ | |
\toc2 1 ಥೆಸ | |
\toc3 1ಥೆಸ | |
\mt 1 ಥೆಸಲೋನಿಕದವರಿಗೆ | |
\is ಗ್ರಂಥಕರ್ತೃತ್ವ | |
\ip ಅಪೊಸ್ತಲನಾದ ಪೌಲನು ಈ ಪತ್ರಿಕೆಯ ಗ್ರಂಥಕರ್ತನೆಂದು ಎರಡು ಸಾರಿ ಗುರುತಿಸಿಕೊಂಡಿದ್ದಾನೆ (1:1; 2:18). ಸೀಲ ಮತ್ತು ತಿಮೊಥೆಯರು (3:2,6), ಎರಡನೆಯ ಮಿಷನರಿ ಪ್ರಯಾಣದಲ್ಲಿ ಈ ಸಭೆಯನ್ನು ಸ್ಥಾಪಿಸುವಾಗ ಪೌಲನ ಸಂಗಡಿಗರಾಗಿದ್ದರು (ಅ.ಕೃ. 17:1-9), ಅವನು ಅವರನ್ನು ಬಿಟ್ಟು ಬಂದ ಕೆಲವೇ ಕೆಲವು ತಿಂಗಳುಗಳೊಳಗೆ ಈ ಮೊದಲ ಪತ್ರಿಕೆಯನ್ನು ಬರೆದನು. ಥೆಸಲೋನಿಕದಲ್ಲಿನ ಪೌಲನ ಸೇವೆಯು ಯೆಹೂದ್ಯರನ್ನು ಮಾತ್ರವಲ್ಲದೆ ಅನ್ಯಜನರನ್ನು ಸಹ ಸ್ಪಷ್ಟವಾಗಿ ಸ್ಪರ್ಶಿಸಿತು. ಸಭೆಯಲ್ಲಿರುವ ಅನೇಕ ಅನ್ಯಜನರು ವಿಗ್ರಹಾರಾಧನೆಯಿಂದ ಹೊರಬಂದವರಾಗಿದ್ದರು, ಇದು ಆ ಸಮಯದಲ್ಲಿನ ಯೆಹೂದ್ಯರ ನಡುವೆ ಒಂದು ನಿರ್ದಿಷ್ಟ ಸಮಸ್ಯೆಯಾಗಿರಲಿಲ್ಲ (1 ಥೆಸ. 1:9). | |
\is ಬರೆದ ದಿನಾಂಕ ಮತ್ತು ಸ್ಥಳ | |
\ip ಸರಿಸುಮಾರು ಕ್ರಿ.ಶ. 51 ರಲ್ಲಿ ಬರೆಯಲ್ಪಟ್ಟಿದೆ. | |
\ip ಪೌಲನು ಕೊರಿಂಥ ಪಟ್ಟಣದಿಂದ ಥೆಸಲೋನಿಕದ ಸಭೆಗೆ ತನ್ನ ಮೊದಲ ಪತ್ರಿಕೆಯನ್ನು ಬರೆದನು. | |
\is ಸ್ವೀಕೃತದಾರರು | |
\ip ಥೆಸಲೋನಿಕದವರಿಗೆ ಬರೆದ ಮೊದಲನೆಯ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರು ಎಂದು 1 ಥೆಸ. 1:1 ತಿಳಿಸುತ್ತದೆ, ಆದರೆ ಸಾಮಾನ್ಯವಾಗಿ ಎಲ್ಲೆಡೆಯಿರುವ ಕ್ರೈಸ್ತರೆಲ್ಲರಿಗೂ ಎಂದು ಇದು ಹೇಳುತ್ತದೆ. | |
\is ಉದ್ದೇಶ | |
\ip ಹೊಸದಾಗಿ ರಕ್ಷಣೆಗೆ ಬಂದವರನ್ನು ಅವರು ಅನುಭವಿಸುವ ಶೋಧನೆಗಳಲ್ಲಿ ಉತ್ತೇಜಿಸುವುದು (3:3-5), ದೈವಭಕ್ತಿಯುಳ್ಳ ಜೀವನದ ಬಗ್ಗೆ ಆದೇಶ ನೀಡುವುದಕ್ಕೆ (4:1-12) ಮತ್ತು ಕ್ರಿಸ್ತನ ಪುನರಾಗಮನಕ್ಕಿಂತ ಮೊದಲು ಸತ್ತುಹೋದ ವಿಶ್ವಾಸಿಗಳ ಭವಿಷ್ಯದ ಬಗ್ಗೆ ಭರವಸೆ ನೀಡುವುದು (4:13-18), ಇನ್ನಿತರ, ನೈತಿಕ ಮತ್ತು ಪ್ರಾಯೋಗಿಕ ವಿಷಯಗಳನ್ನು ಸರಿಪಡಿಸುವುದು ಈ ಪತ್ರಿಕೆಯನ್ನು ಬರೆಯುವುದರ ಪೌಲನ ಉದ್ದೇಶವಾಗಿತ್ತು. | |
\is ಮುಖ್ಯಾಂಶ | |
\ip ಸಭೆಯ ಕುರಿತಾದ ಕಾಳಜಿ | |
\iot ಪರಿವಿಡಿ | |
\io1 1. ಕೃತಜ್ಞತಾಸ್ತುತಿ — 1:1-10 | |
\io1 2. ಅಪೊಸ್ತಲಿಕ ಕ್ರಿಯೆಗಳ ಸಮರ್ಥನೆ — 2:1-3:13 | |
\io1 3. ಥೆಸಲೋನಿಕದವರಿಗೆ ಪ್ರಬೋಧನೆಗಳು — 4:1-5:22 | |
\io1 4. ಅಂತಿಮ ಪ್ರಾರ್ಥನೆ ಮತ್ತು ಆಶೀರ್ವಾದ — 5:23-28 | |
\c 1 | |
\s ಪೀಠಿಕೆ | |
\p | |
\v 1 ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ \f + \fr 1:1 \ft ಅ. ಕೃ. 17:1:\f*ಥೆಸಲೋನಿಕದ ಸಭೆಗೆ ಪೌಲ \f + \fr 1:1 \ft ಅ. ಕೃ. 15:22; 2 ಕೊರಿ 1:19; 2 ಥೆಸ. 1:1; 1 ಪೇತ್ರ 5:12:\f*ಸಿಲ್ವಾನ, ತಿಮೊಥೆಯ ಎಂಬ ನಾವು ಬರೆಯುವುದೇನಂದರೆ, \f + \fr 1:1 \ft ರೋಮಾ. 1:7; ಎಫೆ 1:2:\f*ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ. | |
\s ಪೌಲನು ಥೆಸಲೋನಿಕದವರ ನಂಬಿಕೆಗಾಗಿ ದೇವರಿಗೆ ಮಾಡಿದ ಕೃತಜ್ಞತಾಸ್ತುತಿ | |
\p | |
\v 2-3 ನಾವು \f + \fr 1:2-3 \ft 2 ಥೆಸ. 1:11; ಯೋಹಾ 6:29; ಗಲಾ. 5:6; ಯಾಕೋಬ 2:22:\f*ನಂಬಿಕೆಯ ಫಲವಾದ ನಿಮ್ಮ ಕಾರ್ಯವನ್ನೂ, \f + \fr 1:2-3 \ft 2 ಥೆಸ. 1:3:\f*ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಿನ ನೀವಿಟ್ಟಿರುವ ಅಚಲವಾದ \f + \fr 1:2-3 \ft ರೋಮಾ. 8:25; 15:4:\f*ನಿರೀಕ್ಷೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕ ಮಾಡಿಕೊಂಡು, \f + \fr 1:2-3 \ft ರೋಮಾ. 1:9; 2 ತಿಮೊ. 1:6:\f*ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ. | |
\v 4 \f + \fr 1:4 \ft 2 ಥೆಸ. 2:15:\f*ದೇವರಿಂದ ಪ್ರೀತಿಸಲ್ಪಟ್ಟಿರುವ ಸಹೋದರರೇ, \f + \fr 1:4 \ft 2 ಪೇತ್ರ 1:10:\f*ಆತನು ನಿಮ್ಮನ್ನು ಆರಿಸಿಕೊಂಡನೆಂಬದನ್ನೂ ಬಲ್ಲೆವು. | |
\v 5 ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ \f + \fr 1:5 \ft 2 ಕೊರಿ 6:6; 1 ಕೊರಿ 2:4:\f*ಪವಿತ್ರಾತ್ಮದೊಡನೆಯೂ ಮತ್ತು \f + \fr 1:5 \ft ಸಿದ್ಧಿಪೂರ್ವಕವಾಗಿಯೂ. ಕೊಲೊ 2:2:\f*ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ \f + \fr 1:5 \ft 1 ಥೆಸ. 2:10; 2 ಥೆಸ. 3:7; ಅ. ಕೃ. 20:18:\f*ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ. | |
\v 6 ಇದಲ್ಲದೆ \f + \fr 1:6 \ft ಅ. ಕೃ. 17:5-10:\f*ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ \f + \fr 1:6 \ft ಅ. ಕೃ. 13:52; ಗಲಾ. 5:22:\f*ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, \f + \fr 1:6 \ft 1 ಥೆಸ. 2:14; 2 ಥೆಸ. 3:7, 9; 1 ಕೊರಿ 4:16; 11:1:\f*ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ. | |
\v 7 ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ. | |
\p | |
\v 8 ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ \f + \fr 1:8 \ft ರೋಮಾ. 10:18; 2 ಥೆಸ. 3:1:\f*ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು \f + \fr 1:8 \ft ರೋಮಾ. 1:8; 16:19; 2 ಥೆಸ. 1:4:\f*ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ. | |
\v 9 ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು \f + \fr 1:9 \ft 1 ಕೊರಿ 12:2; ಅ. ಕೃ. 14:15:\f*ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ | |
\v 10 ಮತ್ತು ಆತನು \f + \fr 1:10 \ft ಅ. ಕೃ. 2:24:\f*ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು. | |
\c 2 | |
\s ಪೌಲನು ಥೆಸಲೊನೀಕದಲ್ಲಿ ಮಾಡಿದ ಸೇವೆ | |
\p | |
\v 1 ಸಹೋದರರೇ, \f + \fr 2:1 \ft ಅಥವಾ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂತಲೂ. \f*ನಾವು ವ್ಯರ್ಥವಾಗಿ ನಿಮ್ಮಲ್ಲಿಗೆ ಬರಲಿಲ್ಲವೆಂಬುದು ನಿಮಗೆ ತಿಳಿದಿರುವ ಪ್ರಕಾರವೇ, | |
\v 2 ನಮಗೆ \f + \fr 2:2 \ft ಅ. ಕೃ. 16:22-24:\f*ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ \f + \fr 2:2 \ft ಅ. ಕೃ. 17:2-9:\f*ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ. | |
\v 3 ಯಾಕೆಂದರೆ \f + \fr 2:3 \ft 2 ಕೊರಿ 2:17:\f*ನಮ್ಮ ಬೋಧನೆಯು \f + \fr 2:3 \ft 2 ಥೆಸ. 2:11:\f*ತಪ್ಪಾದದ್ದಲ್ಲ, \f + \fr 2:3 \ft 1 ಥೆಸ 4:7:\f*ಅಶುದ್ಧವಾದದ್ದೂ ಅಲ್ಲ, \f + \fr 2:3 \ft 2 ಕೊರಿ 4:2:\f*ಮೋಸವೂ ಅಲ್ಲ. | |
\v 4 ದೇವರು ನಮ್ಮನ್ನು ಯೋಗ್ಯರೆಂದೆಣಿಸಿ, \f + \fr 2:4 \ft ಗಲಾ. 2:7:\f*ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಿದನು. ಆದುದರಿಂದ \f + \fr 2:4 \ft ಗಲಾ. 1:10:\f*ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿಯಲ್ಲ \f + \fr 2:4 \ft ಕೀರ್ತ 17:3; ರೋಮಾ. 8:27:\f*ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತಿದ್ದೇವೆ. | |
\v 5 ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಯಾರ ಮುಖಸ್ತುತಿಯನ್ನೂ ಮಾಡಿಲ್ಲ ಮತ್ತು \f + \fr 2:5 \ft ಅ. ಕೃ. 20:33:\f*ದುರಾಶೆಯನ್ನು ಮರೆಮಾಡುವುಕ್ಕಾಗಿ ವೇಷವನ್ನು ಹಾಕಿಕೊಂಡಿಲ್ಲ. \f + \fr 2:5 \ft 1 ಥೆಸ. 2:10; ರೋಮಾ. 1:9:\f*ಇದಕ್ಕೆ ದೇವರೇ ಸಾಕ್ಷಿ. | |
\v 6 ಇದಲ್ಲದೆ ನಾವು ಯೇಸು ಕ್ರಿಸ್ತನ \f + \fr 2:6 \ft 1 ಕೊರಿ 9:1:\f*ಅಪೊಸ್ತಲರಾಗಿರುವುದರಿಂದ \f + \fr 2:6 \ft ಅಥವಾ, ನಮ್ಮನ್ನು ಸಂರಕ್ಷಿಸಬೇಕಾದ ಹೊರೆಯನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ. 1 ಕೊರಿ 9:4; 2 ಥೆಸ. 3:9; 1 ಥೆಸ. 2:9; 2 ಕೊರಿ 11:9:\f*ನಮಗೆ ಗೌರವವನ್ನು ತೋರಿಸಬೇಕೆಂದು ಹೇಳಬಹುದಾಗಿದ್ದರೂ, \f + \fr 2:6 \ft 2 ಕೊರಿ 4:5; ಯೋಹಾ 5:41:\f*ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲಿ, ಇತರರಿಂದಾಗಲಿ ಪಡೆದುಕೊಳ್ಳಲು ಅಪೇಕ್ಷಿಸಲಿಲ್ಲ. | |
\v 7 ಆದರೆ \f + \fr 2:7 \ft ವ. 11:\f*ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ. | |
\v 8 ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ \f + \fr 2:8 \ft 2 ಕೊರಿ 12:15:\f*ನಿಮಗಾಗಿ ಪ್ರಾಣವನ್ನೇ ಕೊಡಲೂ ಸಂತೋಷದಿಂದ ಸಿದ್ಧರಾಗಿದ್ದೆವು. | |
\p | |
\v 9 ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು \f + \fr 2:9 \ft ಅ. ಕೃ. 18:3:\f*ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. \f + \fr 2:9 \ft 2 ಥೆಸ. 3:8:\f*ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ. | |
\v 10 ನಂಬುವವರಾದ ನಿಮ್ಮ ವಿಷಯದಲ್ಲಿ \f + \fr 2:10 \ft 1 ಥೆಸ. 1:5 \f*ನಾವು ಎಷ್ಟೋ ನಿರ್ಮಲರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವು ಮತ್ತು \f + \fr 2:10 \ft ವ. 5 ನೋಡಿರಿ. \f*ದೇವರೂ ಸಾಕ್ಷಿಗಳಾಗಿದ್ದೀರಿ. | |
\v 11 \f + \fr 2:11 \ft ವ. 7:\f*ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ, | |
\v 12 ಧೈರ್ಯಪಡಿಸುತ್ತಾ ತನ್ನ ರಾಜ್ಯದಲ್ಲಿ ಮತ್ತು ಆತನ ಮಹಿಮೆಯಲ್ಲಿ ಪಾಲುಗಾರರಾಗುವುದಕ್ಕಾಗಿ \f + \fr 2:12 \ft 1 ಥೆಸ. 5:24; 2 ಥೆಸ. 2:14; 1 ಪೇತ್ರ. 5:10:\f*ಕರೆಯುವ ದೇವರಿಗೆ ತಕ್ಕಹಾಗೆ \f + \fr 2:12 \ft ಎಫೆ 4:1:\f*ಯೋಗ್ಯರಾಗಿ ನೀವು ಜೀವಿಸಬೇಕೆಂದು ವಿಧಿಸಿದೆವೆಂಬುದು ನಿಮಗೇ ತಿಳಿದಿದೆ. | |
\p | |
\v 13 ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು \f + \fr 2:13 \ft ಗಲಾ. 4:14:\f*ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ \f + \fr 2:13 \ft 1 ಥೆಸ. 1:2, 3\f*ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. \f + \fr 2:13 \ft ಇಬ್ರಿ. 4:12:\f*ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಕೆಲಸ ಮಾಡುತ್ತದೆ. | |
\v 14 ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು\f + \fr 2:14 \ft 1 ಥೆಸ. 1:6:\f* ಅನುಸರಿಸುವವರಾಗಿದ್ದಿರಿ. \f + \fr 2:14 \ft ಇಬ್ರಿ. 10:33,34:\f*ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು \f + \fr 2:14 \ft 1 ಥೆಸ. 3:4; ಅ. ಕೃ. 17:5; 2 ಥೆಸ. 1:4,5:\f*ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ. | |
\v 15 \f + \fr 2:15 \ft ಲೂಕ 24:20:\f*ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು \f + \fr 2:15 \ft ಯೆರೆ 2:30; ಮತ್ತಾ 23:29-34; 5:12:\f*ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು. ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. | |
\v 16 \f + \fr 2:16 \ft ಅ. ಕೃ 13:45, 50; 14:2, 19; 17:5, 13; 18:12; 22:21 22:\f*ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೂ ಅಡ್ಡಿಮಾಡುತ್ತಾರೆ. ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣಮಾಡುತ್ತಾರೆ. ಕಡೆಗೆ \f + \fr 2:16 \ft 1 ಥೆಸ. 1:10:\f*ದೇವರ ಕೋಪವು ಅವರ ಮೇಲೆ ಬರುತ್ತದೆ. | |
\s ಪೌಲನು ಥೆಸಲೋನಿಕದವರನ್ನು ನೋಡುವುದಕ್ಕೆ ಆಸೆಪಟ್ಟದ್ದು | |
\p | |
\v 17 ಸಹೋದರರೇ, ನಾವಂತೂ ಸ್ವಲ್ಪಕಾಲ ಮಾತ್ರ ನಿಮ್ಮಿಂದ ದೂರವಾಗಿದ್ದರೂ \f + \fr 2:17 \ft 1 ಕೊರಿ 5:3; ಕೊಲೊ 2:5:\f*ಹೃದಯದಲ್ಲಿ ಅಗಲದೆ \f + \fr 2:17 \ft 1 ಥೆಸ. 3:10:\f*ನಿಮ್ಮನ್ನು ಮುಖಾಮುಖಿಯಾಗಿ ನೋಡುವುದಕ್ಕೆ ಅತಿಯಾದ ಆಸೆಯಿಂದ ಬಹಳ ಪ್ರಯತ್ನಿಸಿದೆವು. | |
\v 18 ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. ಆದರೆ ಸೈತಾನನು ನನಗೆ \f + \fr 2:18 \ft ರೋಮಾ. 1:13; 15:22:\f*ಅಡ್ಡಿ ಮಾಡಿದನು. | |
\v 19 \f + \fr 2:19 \ft 1 ಥೆಸ. 3:13; 4:15; 5:23; ಮತ್ತಾ 24:3; 1 ಕೊರಿ 15:23; 2 ಥೆಸ. 2:1,8; ಯಾಕೋಬ 5:7,8; 2 ಪೇತ್ರ 1:16; 3:4, 12; 1 ಯೋಹಾ 2:28:\f*ನಮ್ಮ ಕರ್ತನಾದ ಯೇಸು ಹಿಂತಿರುಗಿ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆಯೂ, \f + \fr 2:19 \ft ಫಿಲಿ. 4:1:\f*ನಮ್ಮ ಸಂತೋಷವೂ, ನಾವು ಹೊಗಳಿಕೊಳ್ಳುವ ಕಿರೀಟವೂ ಯಾರು? \f + \fr 2:19 \ft 1 ಕೊರಿ 15:31; 2 ಥೆಸ. 1:4:\f*ನೀವೇ ಅಲ್ಲವೇ. | |
\v 20 ಹೀಗಿರಲಾಗಿ ನೀವೇ ನಮ್ಮ ಮಹಿಮೆ ಮತ್ತು ಸಂತೋಷವೂ ಆಗಿದ್ದೀರಿ. | |
\c 3 | |
\p | |
\v 1 ಆದುದರಿಂದ ನಾನು ಇನ್ನು ತಾಳಲಾರದೆ \f + \fr 3:1 \ft ಅ. ಕೃ. 17:15, 16:\f*ಅಥೇನೆಯಲ್ಲಿ ಒಬ್ಬಂಟಿಗನಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿ, | |
\v 2 ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ \f + \fr 3:2 \ft 2 ಕೊರಿ 1:1; ಕೊಲೊ 1:1; ಫಿಲೆ. 1; ಇಬ್ರಿ. 13:23:\f*ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ \f + \fr 3:2 \ft ಫಿಲಿ. 2:19:\f*ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು. | |
\v 3 \f + \fr 3:3 \ft ಅ. ಕೃ. 9:16; 14:22:\f*ಸಂಕಟಗಳನ್ನು ಅನುಭವಿಸುವುದಕ್ಕಾಗಿಯೇ ನಾವು ನೇಮಿಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ. | |
\v 4 ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಈ ಮೊದಲೇ ಹೇಳಿದ್ದೆವಲ್ಲಾ. \f + \fr 3:4 \ft 1 ಥೆಸ. 2:14:\f*ಅದರಂತೆಯೇ ಆಯಿತು, ಅದು ನಿಮ್ಮ ಅನುಭವಕ್ಕೂ ಬಂದಿತು. | |
\v 5 ಆದ್ದರಿಂದ ಇನ್ನು ತಡೆಯಲಾರದೆ ಒಂದು ವೇಳೆ ಶೋಧಕನು ನಿಮ್ಮನ್ನು ಶೋಧಿಸಿದ್ದರಿಂದ \f + \fr 3:5 \ft ಫಿಲಿ. 2:16:\f*ನಮ್ಮ ಪ್ರಯಾಸವು ವ್ಯರ್ಥವಾಯಿತೋ ಏನೋ ಎಂದು ನಿಮ್ಮ ನಂಬಿಕೆಯನ್ನು ಕುರಿತು ನಾನು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ನಿಮ್ಮ ಬಳಿಗೆ ಕಳುಹಿಸಿದೆನು. | |
\p | |
\v 6 \f + \fr 3:6 \ft ಅ. ಕೃ. 18:5; 2 ಕೊರಿ 7:6, 9:\f*ಆದರೆ ತಿಮೊಥೆಯನು ನಿಮ್ಮ ಬಳಿಯಿಂದ ಬಂದು \f + \fr 3:6 \ft 1 ಥೆಸ 1:3:\f*ನಿಮ್ಮ ನಂಬಿಕೆ ಮತ್ತು ಪ್ರೀತಿಯ ಕುರಿತಾಗಿ ಶುಭವರ್ತಮಾನವನ್ನು ಹೇಳಿ, \f + \fr 3:6 \ft 1 ಕೊರಿ 11:2:\f*ನೀವು ನಮ್ಮನ್ನು ಯಾವಾಗಲೂ ಪ್ರೀತಿಪೂರ್ವಕವಾಗಿ ನೆನಪುಮಾಡಿಕೊಂಡು ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ಸಹ ನಮ್ಮನ್ನು ನೋಡುವುದಕ್ಕಾಗಿ ಅಪೇಕ್ಷಿಸುತ್ತಿದ್ದೀರೆಂಬುದನ್ನು ತಿಳಿಸಿದ್ದಾನೆ. | |
\p | |
\v 7 ಸಹೋದರರೇ, ಈ ವಾರ್ತೆಯನ್ನು ಕೇಳಿ \f + \fr 3:7 \ft 2 ಕೊರಿ 1:4:\f*ನಮ್ಮ ಎಲ್ಲಾ ಕಷ್ಟದಲ್ಲಿಯೂ ಸಂಕಟದಲ್ಲಿಯೂ ನಿಮ್ಮ ನಂಬಿಕೆಯ ಮುಖಾಂತರ ನಮಗೆ ಸಮಾಧಾನವಾಯಿತು. | |
\v 8 \f + \fr 3:8 \ft 1 ಕೊರಿ 16:13:\f*ನೀವು ಕರ್ತನಲ್ಲಿ ದೃಢವಾಗಿ ನಿಂತಿದ್ದರೆ ನಮಗೆ ಜೀವಕಳೆ. | |
\v 9 ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಸಂತೋಷಗಳಿಗಾಗಿ \f + \fr 3:9 \ft 1 ಥೆಸ. 1:2:\f*ದೇವರಿಗೆ ಅಷ್ಟೊಂದು ಸ್ತೋತ್ರ ಮಾಡುವುದು ನಮ್ಮಿಂದಾದಿತೇ? | |
\v 10 \f + \fr 3:10 \ft 1 ಥೆಸ. 2:17:\f*ನಿಮ್ಮ ಮುಖವನ್ನು ನೋಡುವುದಕ್ಕೂ \f + \fr 3:10 \ft ಎಫೆ 4:12,13:\f*ನಿಮ್ಮ ನಂಬಿಕೆಯ ಕೊರತೆಗಳನ್ನು ನೀಗುವುದಕ್ಕೂ ನಾವು \f + \fr 3:10 \ft 2 ತಿಮೊ. 1:3:\f*ಹಗಲಿರುಳು ದೇವರನ್ನು ತುಂಬಾ ಕಳಕಳಿಯಿಂದ ಬೇಡುವವರಾಗಿದ್ದೇವೆ. | |
\v 11 ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು, ನಾವು ನಿಮ್ಮ ಬಳಿಗೆ ಬರುವುದಕ್ಕೆ ಮಾರ್ಗವನ್ನು ಸರಾಗಮಾಡಿಕೊಡಲಿ. | |
\p | |
\v 12 ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು \f + \fr 3:12 \ft 1 ಥೆಸ. 4:9; 5:15 \f*ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ. | |
\v 13 ನಮ್ಮ ಕರ್ತನಾದ ಯೇಸು ತನ್ನ \f + \fr 3:13 \ft ಜೆಕ. 14:5; ಯೂದ 14:\f*ಪರಿಶುದ್ಧ ಪರಿವಾರ ಸಮೇತ ಪುನರಾಗಮಿಸುವಾಗ ತಂದೆಯಾದ ದೇವರ ಸಮಕ್ಷಮದಲ್ಲಿ \f + \fr 3:13 \ft ಯಾಕೋಬ 5:8; 1 ಪೇತ್ರ 5:10:\f*ನೀವು ಪರಿಶುದ್ಧರೂ, ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ. | |
\c 4 | |
\s ದೇವರಿಗೆ ಮೆಚ್ಚಿಕೆಯಾದ ಜೀವನ | |
\p | |
\v 1 ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ \f + \fr 4:1 \ft 1 ಕೊರಿ 11:2:\f*ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ. | |
\v 2 ಅದುದರಿಂದ \f + \fr 4:2 \ft ಎಫೆ 4:1:\f*ನೀವು ಹೇಗೆ ನಡೆದು \f + \fr 4:2 \ft ಕೊಲೊ 1:10:\f*ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು \f + \fr 4:2 \ft ಫಿಲಿ. 4:9:\f*ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. | |
\v 3 \f + \fr 4:3 \ft ರೋಮಾ. 6:19, 22; 1 ಕೊರಿ 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:\f*ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. \f + \fr 4:3 \ft 1 ಕೊರಿ 6:18:\f*ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು. | |
\v 4-5 \f + \fr 4:4-5 \ft ಕೀರ್ತ 79:6; ಗಲಾ. 4:8:\f*ದೇವರನ್ನರಿಯದ \f + \fr 4:4-5 \ft ಎಫೆ 4:17:\f*ಅನ್ಯಜನರಂತೆ \f + \fr 4:4-5 \ft ರೋಮಾ. 1:26:\f*ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ \f + \fr 4:4-5 \ft ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು. \f*ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. | |
\v 6 ಈ ವಿಷಯದಲ್ಲಿ \f + \fr 4:6 \ft 1 ಕೊರಿ 6:8:\f*ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ \f + \fr 4:6 \ft ರೋಮಾ. 13:4; 12:19:\f*ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ. | |
\v 7 ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ \f + \fr 4:7 \ft 1 ಥೆಸ. 4:3; 1 ಪೇತ್ರ. 1:15:\f*ಶುದ್ಧರಾಗಿರುವುದಕ್ಕೆ ಕರೆದನು. | |
\v 8 ಹೀಗಿರಲು \f + \fr 4:8 \ft ಲೂಕ 10:16:\f*ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ \f + \fr 4:8 \ft 1 ಯೋಹಾ 3:24; 4:13:\f*ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ. | |
\p | |
\v 9 \f + \fr 4:9 \ft ಇಬ್ರಿ. 13:1 \f*ಸಹೋದರ ಸ್ನೇಹದ ವಿಷಯದಲ್ಲಿ \f + \fr 4:9 \ft 1 ಥೆಸ. 5:1:\f*ನಿಮಗೆ ಬರೆಯುವ ಅವಶ್ಯಕತೆಯಿಲ್ಲ, \f + \fr 4:9 \ft ಯೋಹಾ 13:34:\f*ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ. | |
\v 10 \f + \fr 4:10 \ft 1 ಥೆಸ. 1:7:\f*ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, \f + \fr 4:10 \ft 1 ಥೆಸ. 3:12:\f*ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ. | |
\v 11 ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು \f + \fr 4:11 \ft 2 ಥೆಸ. 3:11; 1 ಪೇತ್ರ. 4:15:\f*ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ \f + \fr 4:11 \ft ಜ್ಞಾ. 17:14:\f*ಸುಮ್ಮಗಿದ್ದು, \f + \fr 4:11 \ft 2 ಥೆಸ. 3:12:\f*ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, \f + \fr 4:11 \ft ಅ. ಕೃ. 18:3; ಎಫೆ 4:28:\f*ಕೈಯಾರೆ ಕೆಲಸಮಾಡಿ ದುಡಿಯಿರಿ. | |
\v 12 ಹೀಗಿದ್ದರೆ ನೀವು \f + \fr 4:12 \ft ಮಾರ್ಕ 4:11; 1 ಕೊರಿ 5:12, 13; ಕೊಲೊ 4:5; 1 ತಿಮೊ. 3:7:\f*ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ. | |
\s ಯೇಸು ಕರ್ತನು ಪುನರಾಗಮನ | |
\p | |
\v 13 ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, \f + \fr 4:13 \ft ಎಫೆ 2:12:\f*ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ \f + \fr 4:13 \ft ಯಾಜ 19:28; ಧರ್ಮೋ 14:1; 2 ಸಮು 12:20-23; ಮಾರ್ಕ 5:39:\f*ದುಃಖಿಸಬಾರದು ಎಂಬುದೇ ನಮ್ಮ ಬಯಕೆ. | |
\v 14 \f + \fr 4:14 \ft 1 ಕೊರಿ 15:13; 2 ಕೊರಿ 4:14; ಪ್ರಕ 1:18:\f*ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ \f + \fr 4:14 \ft ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ. \f*ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ \f + \fr 4:14 \ft 1 ಕೊರಿ 15:18:\f*ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. | |
\v 15 ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, \f + \fr 4:15 \ft 1 ಥೆಸ. 2:19:\f*ಕರ್ತನು ಪುನರಾಗಮಿಸುವವರೆಗೆ \f + \fr 4:15 \ft 1 ಕೊರಿ 15:51:\f*ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ. | |
\v 16 ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, \f + \fr 4:16 \ft ಯೂದ. 9:\f*ಪ್ರಧಾನದೂತನ ಶಬ್ದದೊಡನೆಯೂ, \f + \fr 4:16 \ft ಮತ್ತಾ 24:31; 1 ಕೊರಿ 15:52:\f*ದೇವರ ತುತ್ತೂರಿ ಧ್ವನಿಯೊಡನೆಯೂ \f + \fr 4:16 \ft ಮತ್ತಾ 16:27; 2 ಥೆಸ. 1:7:\f*ಆಕಾಶದಿಂದ ಇಳಿದುಬರುವನು. \f + \fr 4:16 \ft 1 ಕೊರಿ 15:23; 2 ಥೆಸ. 2:1; ಪ್ರಕ 14:13:\f*ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು. | |
\v 17 ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ \f + \fr 4:17 \ft ದಾನಿ. 7:13; ಅ. ಕೃ. 1:9:\f*ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ \f + \fr 4:17 \ft ಯೋಹಾ 12:26:\f*ಕರ್ತನ ಜೊತೆಯಲ್ಲಿರುವೆವು. | |
\v 18 ಆದಕಾರಣ ಈ ಮಾತುಗಳಿಂದ \f + \fr 4:18 \ft 1 ಥೆಸ. 5:11:\f*ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ. | |
\c 5 | |
\p | |
\v 1 ಸಹೋದರರೇ, \f + \fr 5:1 \ft ಅ. ಕೃ. 1:7:\f*ಈ ಸಂಗತಿಗಳು ನಡೆಯಬೇಕಾಗಿರುವ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು \f + \fr 5:1 \ft 1 ಥೆಸ. 4:9:\f*ನಿಮಗೆ ಬರೆಯುವುದು ಅಗತ್ಯವಿಲ್ಲ. | |
\v 2 \f + \fr 5:2 \ft 2 ಥೆಸ. 2:2; ಮತ್ತಾ 24:43; ಲೂಕ 17:24:\f*ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. | |
\v 3 “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ \f + \fr 5:3 \ft ಲೂಕ 21:34:\f*ನಾಶನವು ಅವರ ಮೇಲೆ \f + \fr 5:3 \ft ಯೆಶಾ 13:8:\f*ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು. | |
\v 4 ಆದರೆ ಸಹೋದರರೇ, \f + \fr 5:4 \ft ಕೆಲವು ಪ್ರತಿಗಳಲ್ಲಿ, ಕಳ್ಳರ ಮೇಲೆ ಹಗಲಿನ ಬೆಳಕು ಫಕ್ಕನೆ ಬಂದಿತೋ ಎಂಬಂತೆ ಆ ದಿನವು ಎಂದು ಬರೆದದೆ. \f*ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ \f + \fr 5:4 \ft 1 ಯೋಹಾ 2:8:\f*ನೀವು ಕತ್ತಲೆಯಲ್ಲಿರುವವರಲ್ಲ. | |
\v 5 ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ. | |
\v 6 ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ. | |
\v 7 ನಿದ್ರೆಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ, ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ. | |
\v 8 ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ. | |
\v 9 ಯಾಕೆಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದಿಕೊಳ್ಳಬೇಕೆಂದು ನೇಮಿಸಿದನು. | |
\v 10 ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು. | |
\v 11 ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ. | |
\s ಕ್ರೈಸ್ತರು ಅನುಸರಿಸತಕ್ಕ ಕೆಲವು ಸೂತ್ರಗಳು | |
\p | |
\v 12 ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ, | |
\v 13 ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಗೌರವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ. | |
\p | |
\v 14 ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ. | |
\v 15 ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ. | |
\p | |
\v 16 ಯಾವಾಗಲೂ ಸಂತೋಷಿಸಿರಿ, | |
\v 17 ಎಡೆಬಿಡದೆ ಪ್ರಾರ್ಥನೆಮಾಡಿರಿ, | |
\v 18 ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ. | |
\v 19 ಪವಿತ್ರಾತ್ಮನನ್ನು ನಂದಿಸಬೇಡಿ, | |
\v 20 ಪ್ರವಾದನೆಗಳನ್ನು ಹಿನೈಸಬೇಡಿರಿ. | |
\v 21 ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ. | |
\v 22 ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ. | |
\s ಸಮಾಪ್ತಿ ವಾಕ್ಯಗಳು. | |
\p | |
\v 23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ. | |
\v 24 ನಿಮ್ಮನ್ನು ಕರೆದವನು ನಂಬಿಗಸ್ತನು, ಆತನು ತನ್ನ ಕಾರ್ಯವನ್ನು ಸಾಧಿಸುವನು. | |
\p | |
\v 25 ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ. | |
\v 26 ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನೂ ವಂದಿಸಿರಿ. | |
\v 27 ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಲ್ಲಿ ಆಜ್ಞಾಪಿಸುತ್ತೇನೆ. | |
\p | |
\v 28 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. | |