Datasets:

ArXiv:
License:
anjalyjayakrishnan's picture
kannada raw data
32165da
raw
history blame
25 kB
\id 2TH
\ide UTF-8
\rem Copyright © 2017 Bridge Connectivity Solutions. This translation is made available to you under the terms of the Creative Commons Attribution-ShareAlike 4.0 License
\h 2 ಥೆಸಲೋನಿಕದವರಿಗೆ
\toc1 2 ಥೆಸಲೋನಿಕದವರಿಗೆ
\toc2 2 ಥೆಸ
\toc3 2ಥೆಸ
\mt 2 ಥೆಸಲೋನಿಕದವರಿಗೆ
\is ಗ್ರಂಥಕರ್ತೃತ್ವ
\ip 1 ಥೆಸಲೋನಿಕದಂತೆ, ಈ ಪತ್ರಿಕೆಯು ಪೌಲ, ಸೀಲ ಮತ್ತು ತಿಮೊಥೆಯರಿಂದ ಬರೆಯಲ್ಪಟ್ಟದ್ದಾಗಿದೆ. ಈ ಪತ್ರಿಕೆಯ ಗ್ರಂಥಕರ್ತನು 1 ಥೆಸಲೋನಿಕದಲ್ಲಿರುವ ಮತ್ತು ಪೌಲನು ಬರೆದ ಇತರ ಪತ್ರಿಕೆಗಳಲ್ಲಿರುವಂತಹ ಅದೇ ಶೈಲಿಯನ್ನು ಬಳಸಿದ್ದಾನೆ. ಇದು ಪೌಲನೇ ಮುಖ್ಯ ಗ್ರಂಥಕರ್ತನು ಎಂದು ತೋರಿಸುತ್ತದೆ. ಸೀಲ ಮತ್ತು ತಿಮೊಥೆಯರು ವಂದನೆ ಭಾಗದಲ್ಲಿ ಸೇರ್ಪಡೆಗೊಂಡಿದ್ದಾರೆ (2 ಥೆಸ. 1:1). ಅನೇಕ ವಚನಗಳಲ್ಲಿ, ನಾವು ಬರೆಯುತ್ತೇವೆ ಎಂಬ ವಿಷಯವು, ಅವರು ಮೂವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಪೌಲನ ಅಂತಿಮ ವಂದನೆ ಮತ್ತು ಪ್ರಾರ್ಥನೆಯನ್ನು ಬರೆದಿರುವುದರಿಂದ ಕೈಬರಹವು ಅವನದಲ್ಲ (2 ಥೆಸ. 3:17). ಈ ಪತ್ರಿಕೆಯನ್ನು ಪೌಲನು ತಿಮೊಥೆಗೆ ಅಥವಾ ಸೀಲನಿಗೆ ಹೇಳಿ ಬರೆಯಿಸಿರುವುದು ಎಂದು ತೋರುತ್ತದೆ.
\is ಬರೆದ ದಿನಾಂಕ ಮತ್ತು ಸ್ಥಳ
\ip ಸರಿಸುಮಾರು ಕ್ರಿ.ಶ. 51-52 ರ ನಡುವೆ ಬರೆಯಲ್ಪಟ್ಟಿದೆ.
\ip 1 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಬರೆದಂತಹ ಸ್ಥಳವಾದ ಕೊರಿಂಥದಲ್ಲಿಯೇ 2 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದನು.
\is ಸ್ವೀಕೃತದಾರರು
\ip 2 ಥೆಸ. 1:1 ರ ಪ್ರಕಾರ ಥೆಸಲೋನಿಕದವರಿಗೆ ಬರೆದ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರಾಗಿದ್ದಾರೆ.
\is ಉದ್ದೇಶ
\ip ಕರ್ತನ ದಿನದ ಕುರಿತಾದ ಸೈದ್ಧಾಂತಿಕ ದೋಷವನ್ನು ಸರಿಪಡಿಸುವುದು ಇದರ ಉದ್ದೇಶವಾಗಿತ್ತು. ವಿಶ್ವಾಸಿಗಳನ್ನು ಪ್ರಶಂಸಿಸಲು ಮತ್ತು ನಂಬಿಕೆಯಲ್ಲಿನ ಅವರ ದೃಢನಿಷ್ಠೆಕ್ಕಾಗಿ ಅವರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಂತಿಮಗತಿಶಾಸ್ತ್ರದ ಸ್ವಯಂ ವಂಚನೆಯ ನಿಮಿತ್ತ, ಕರ್ತನ ದಿನವು ಬಂದಿರುವುದರಿಂದ ಕರ್ತನ ಪುನರಾಗಮನವು ಶೀಘ್ರದಲ್ಲೇ ಉಂಟಾಗುತ್ತದೆ ಎಂದು ನಂಬಿದಂಥವರನ್ನು ಮತ್ತು ಈ ಸಿದ್ಧಾಂತವನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರ್ಪಯೋಗ ಮಾಡಿಕೊಂಡವರನ್ನು ಗದರಿಸುವುದಕ್ಕಾಗಿ ಬರೆದನು.
\is ಮುಖ್ಯಾಂಶ
\ip ನಿರೀಕ್ಷೆಯಲ್ಲಿ ಜೀವಿಸುವುದು
\iot ಪರಿವಿಡಿ
\io1 1. ವಂದನೆ — 1:1-2
\io1 2. ಸಂಕಷ್ಟದಲ್ಲಿ ಸಾಂತ್ವನ — 1:3-12
\io1 3. ಕರ್ತನ ದಿನಕ್ಕೆ ಸಂಬಂಧಿಸಿದಂತೆ ಸರಿಪಡಿಸುವಿಕೆ — 2:1-12
\io1 4. ಅವರ ಅಂತ್ಯಾವಸ್ಥೆಗೆ ಸಂಬಂಧಿಸಿದ ಜ್ಞಾಪನೆ — 2:13-17
\io1 5. ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಬೋಧನೆಗಳು — 3:1-15
\io1 6. ಅಂತಿಮ ವಂದನೆಗಳು — 3:16-18
\c 1
\s ಪೀಠಿಕೆ
\p
\v 1 \f + \fr 1:1 \ft ವ. 1, 2; 1 ಥೆಸ. 1:1:\f*ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ,
\v 2 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
\s ದೇವರಿಗೆ ಕೃತಜ್ಞತಾಸ್ತುತಿ
\p
\v 3 \f + \fr 1:3 \ft 2 ಥೆಸ. 2:13; 1 ಥೆಸ. 1:2, 3; ಎಫೆ 5:20:\f*ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ.
\v 4 ಹೀಗಿರುವುದರಿಂದ \f + \fr 1:4 \ft 1 ಥೆಸ. 2:14:\f*ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ \f + \fr 1:4 \ft 1 ಥೆಸ. 2:19; 2 ಕೊರಿ 7:14:\f*ನಿಮಿತ್ತ \f + \fr 1:4 \ft 1 ಥೆಸ. 1:8:\f*ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
\p
\v 5 \f + \fr 1:5 \ft ಫಿಲಿ. 1:28:\f*ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ \f + \fr 1:5 \ft ಅ. ಕೃ. 14:22:\f*ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.
\v 6 ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ \f + \fr 1:6 \ft ಪ್ರಕ 6:11; 11:18; 14:13:\f*ನಮ್ಮೊಡನೆ ಉಪಶಮನವನ್ನೂ ಕೊಡುವುದು \f + \fr 1:6 \ft ಪ್ರಕ 6:10:\f*ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.
\v 7 ಯೇಸು ಕರ್ತನು \f + \fr 1:7 \ft ಯೂದ 14:\f*ತನ್ನ ಶಕ್ತಿಯುತ ದೇವದೂತರೊಂದಿಗೆ \f + \fr 1:7 \ft ಯೆಶಾ 66:15, 16; ಮಲಾ. 4:1; ಮತ್ತಾ 25:41; 1 ಕೊರಿ 3:13; ಇಬ್ರಿ. 10:27; 12:29; ಪ್ರಕ 21:8:\f*ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ \f + \fr 1:7 \ft ಲೂಕ 17:30; 1 ಕೊರಿ 1:7; 1 ಪೇತ್ರ. 1:7, 13; 4:13; ಮತ್ತಾ 16:27; 24:44:\f*ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
\v 8 ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ \f + \fr 1:8 \ft ರೋಮಾ. 2:8:\f*ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.
\v 9 ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.
\v 10 ಆ ದಿನದಲ್ಲಿ ಆತನು ಬರುವಾಗ ತನ್ನ \f + \fr 1:10 \ft ಯೆಶಾ 49:3; ಯೋಹಾ 17:10:\f*ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.
\v 11 \f + \fr 1:11 \ft 1 ಕೊರಿ 3:13:\f*ಆದುದರಿಂದ \f + \fr 1:11 \ft ಕೊಲೊ 1:9:\f*ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ \f + \fr 1:11 \ft ವ. 5:\f*ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, \f + \fr 1:11 \ft 1 ಥೆಸ. 1:3:\f*ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.
\v 12 ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವುದು ನೀವೂ ಆತನಲ್ಲಿ ಮಹಿಮೆ ಹೊಂದುವಿರಿ.
\c 2
\s ಅಧರ್ಮ ಪುರುಷನು
\p
\v 1 ಸಹೋದರರೇ, ನಮ್ಮ ಕರ್ತನಾದ \f + \fr 2:1 \ft 1 ಥೆಸ. 2:19:\f*ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು \f + \fr 2:1 \ft ಮತ್ತಾ 24:31; 1 ಥೆಸ. 4:15-17:\f*ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ,
\v 2 ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ \f + \fr 2:2 \ft 1 ಯೋಹಾ 4:1:\f*ಆತ್ಮದಿಂದಾಗಲಿ \f + \fr 2:2 \ft ವ. 15:\f*ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.
\p
\v 3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ \f + \fr 2:3 \ft 1 ತಿಮೊ. 4:1:\f*ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ \f + \fr 2:3 \ft ವ. 8; ದಾನಿ. 7:25; 8:25; 11:36; ಪ್ರಕ 13:5, 6. ವಿಧ್ವಂಸಕನು\f*ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ.
\v 4 ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ \f + \fr 2:4 \ft ಯೋಹಾ 17:12:\f*ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು \f + \fr 2:4 \ft ಯೆಶಾ 14:14; ಯೆಜೆ. 28:2:\f*ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
\p
\v 5 ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ?
\v 6 ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.
\v 7 \f + \fr 2:7 \ft 1 ಯೋಹಾ 2:18; 4:3:\f*ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು.
\v 8 ಆಗ \f + \fr 2:8 \ft ವ. 3:\f*ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು \f + \fr 2:8 \ft ಯೆಶಾ 11:4:\f*ತನ್ನ ಬಾಯಿಯ ಉಸಿರಿನಿಂದ \f + \fr 2:8 \ft ದಾನಿ. 7:10, 11:\f*ಕೊಲ್ಲುವನು, \f + \fr 2:8 \ft 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:\f*ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು.
\v 9 ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ \f + \fr 2:9 \ft ಮತ್ತಾ 24:24; ಪ್ರಕ 13:14:\f*ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ,
\v 10 ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ \f + \fr 2:10 \ft 1 ಕೊರಿ 1:18:\f*ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.
\v 11 ಇದೇ ಕಾರಣದಿಂದ \f + \fr 2:11 \ft 1 ಅರಸು 22:22; ಯೆಹೆ. 14:9:\f*ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು \f + \fr 2:11 \ft ರೋಮಾ. 1:25:\f*ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ.
\v 12 \f + \fr 2:12 \ft ರೋಮಾ. 1:32; 2:8:\f*ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ \f + \fr 2:12 \ft ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ. \f*ಗುರಿಯಾಗುವರು.
\s ದೃಢವಾಗಿ ನಿಲ್ಲಿರಿ
\p
\v 13 \f + \fr 2:13 \ft 1 ಥೆಸ. 1:4:\f*ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, \f + \fr 2:13 \ft 1 ಥೆಸ. 4:3:\f*ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, \f + \fr 2:13 \ft 1 ಥೆಸ. 5:9; 2 ತಿಮೊ. 1:9:\f*ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು \f + \fr 2:13 \ft ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ. \f*ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು \f + \fr 2:13 \ft 1 ಥೆಸ. 1:3:\f*ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ.
\v 14 ನೀವು ಹೀಗೆ \f + \fr 2:14 \ft 1 ಥೆಸ. 5:9; 2 ತಿಮೊ. 1:9:\f*ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು.
\v 15 ಹೀಗಿರುವುದರಿಂದ ಸಹೋದರರೇ, \f + \fr 2:15 \ft 1 ಕೊರಿ 16:13:\f*ದೃಢವಾಗಿ ನಿಲ್ಲಿರಿ. \f + \fr 2:15 \ft ವ. 2:\f*ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ.
\v 16 ಮತ್ತು \f + \fr 2:16 \ft ಯೋಹಾ 3:16; 1 ಯೋಹಾ 4:10; ಪ್ರಕ 1:5 \f*ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ \f + \fr 2:16 \ft 1 ಪೇತ್ರ. 1:3:\f*ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ,
\v 17 ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ \f + \fr 2:17 \ft 1 ಥೆಸ. 3:13; 2 ಥೆಸ. 3:3:\f*ದೃಢಪಡಿಸಲಿ.
\c 3
\s ಪ್ರಾರ್ಥನೆಗಾಗಿ ವಿನಂತಿ
\p
\v 1 ಕಡೆಯದಾಗಿ, \f + \fr 3:1 \ft 1 ಥೆಸ. 5:25:\f*ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ \f + \fr 3:1 \ft ಕೀರ್ತ 147:15; 1 ಥೆಸ. 1:8:\f*ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ,
\v 2 \f + \fr 3:2 \ft ರೋಮಾ. 15:31:\f*ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ.
\v 3 ಆದರೆ \f + \fr 3:3 \ft 1 ಕೊರಿ 1:9:\f*ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು \f + \fr 3:3 \ft 1 ಯೋಹಾ 2:14:\f*ಕೆಡುಕನ ಕೈಗೆ \f + \fr 3:3 \ft ಮತ್ತಾ 6:13; ಯೋಹಾ 17:15:\f*ಸಿಕ್ಕದಂತೆ ಕಾಪಾಡುವನು.
\v 4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.
\v 5 ನೀವು ದೇವರ ಪ್ರೀತಿಯಲ್ಲಿಯೂ \f + \fr 3:5 \ft ಅಥವಾ, ಕ್ರಿಸ್ತನನ್ನು ಎದುರುನೋಡುವ. \f*ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.
\s ಮೈಗಳ್ಳರಿಗೆ ಎಚ್ಚರಿಕೆ
\p
\v 6 ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ \f + \fr 3:6 \ft ವ. 11; 1 ಥೆಸ. 5:14:\f*ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ \f + \fr 3:6 \ft 1 ಕೊರಿ 5:11:\f*ಸಹೋದರನಿಂದ ನೀವು \f + \fr 3:6 \ft ವ. 14; ಮತ್ತಾ 18:17; 2 ತಿಮೊ. 3:5; 1 ಕೊರಿ 5:9; 2 ಯೋಹಾ 10:\f*ದೂರವಾಗಿರಬೇಕೆಂದು \f + \fr 3:6 \ft 1 ಕೊರಿ 5:4:\f*ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.
\v 7 \f + \fr 3:7 \ft ಅ. ಕೃ. 20:35; 1 ಥೆಸ. 1:6:\f*ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, \f + \fr 3:7 \ft 1 ಥೆಸ. 1:5 \f*ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ.
\v 8 ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, \f + \fr 3:8 \ft 1 ಥೆಸ. 2:9:\f*ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು.
\v 9 \f + \fr 3:9 \ft 1 ಕೊರಿ 9:4; 1 ಥೆಸ. 2:6:\f*ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, \f + \fr 3:9 \ft ವ. 7; 1 ಪೇತ್ರ. 5:3:\f*ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು.
\v 10 ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, \f + \fr 3:10 \ft ಆದಿ 3:19; 1 ಥೆಸ. 4:11:\f*“ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ.
\v 11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, \f + \fr 3:11 \ft 1 ತಿಮೊ. 5:13; 1 ಪೇತ್ರ. 4:15:\f*ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ.
\v 12 ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ.
\v 13 ಸಹೋದರರೇ, \f + \fr 3:13 \ft ಗಲಾ. 6:9; 1 ಕೊರಿ 15:58:\f*ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
\v 14 ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ \f + \fr 3:14 \ft ವ. 6:\f*ಅವನ ಸಹವಾಸದಲ್ಲಿ ಸೇರಬೇಡಿರಿ.
\v 15 ಆದರೂ \f + \fr 3:15 \ft ಯಾಜಕ. 19:17; ಮತ್ತಾ 18:15:\f*ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
\s ಸಮಾಪ್ತಿ ವಾಕ್ಯಗಳು
\p
\v 16 \f + \fr 3:16 \ft ರೋಮಾ. 15:33:\f*ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ \f + \fr 3:16 \ft ಅರಣ್ಯ 6:26:\f*ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
\p
\v 17 \f + \fr 3:17 \ft 1 ಕೊರಿ 16:21:\f*ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
\p
\v 18 \f + \fr 3:18 \ft ರೋಮಾ. 16:20:\f*ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.