text
stringlengths 0
2.67k
|
---|
ಸಂಪಾದಿಸಿ |
ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು.1973 ರಲ್ಲಿ ಸ್ಥಾಪನೆಯಾಯಿತು.ಅಣ್ಣಿಗೇರಿ ಪುರಸಭೆಯು ಅಂಕೊಲಾದಿಂದ ಗೂಟಿಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ,ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ,ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು 32.00 ಚದುರ ಕೀಲೋಮೀಟರ್ ಗಳಿರುತ್ತದೆ,ಚಾಲಿಕ್ಯರು ತಮ್ಮ ಆಡಳಿತದಲ್ಲಿ ಅಣ್ಣಿಗೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. |
ಅಣ್ಣಿಗೇರಿ |
ಅಣ್ಣಿಗೇರಿ ನಗರದ ಪಕ್ಷಿನೋಟAಅಮೃತೇಶ್ವರ ದೇವಸ್ಥಾನ |
ಅಣ್ಣಿಗೇರಿ |
ರಾಜ್ಯ |
- ಜಿಲ್ಲೆ |
ಕರ್ನಾಟಕ |
- ಧಾರವಾಡ |
ನಿರ್ದೇಶಾಂಕಗಳು |
15.43° N 75.43° E |
ವಿಸ್ತಾರ |
- ಎತ್ತರ |
11.1 km² |
- 624 ಮೀ. |
ಸಮಯ ವಲಯ |
IST (UTC+5:30) |
ಜನಸಂಖ್ಯೆ (2001) |
- ಸಾಂದ್ರತೆ |
25709 |
- 2316.13/ಚದರ ಕಿ.ಮಿ. |
ಕೋಡ್‍ಗಳು |
- ಪಿನ್ ಕೋಡ್ |
- ಎಸ್.ಟಿ.ಡಿ. |
- ವಾಹನ |
- 582 201 |
- +08380 |
- KA-25 |
ಪರಿವಿಡಿ |
ಇತಿಹಾಸ |
ಬದಲಾಯಿಸಿ |
ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ೧೧೫೭ರಲ್ಲಿ ಕಳಚೂರಿ ವಂಶದ ೨ನೇ ಬಿಜ್ಜಳನು ಬಸವಕಲ್ಯಾಣವನ್ನು ವಶಪಡಿಸಿಕೊಂಡಾಗ ಚಾಳುಕ್ಯರು ಅಲ್ಲಿಂದ ಅಣ್ಣಿಗೇರಿಗೆ ತಮ್ಮ ರಾಜಧಾನಿಯನ್ನು ಬದಲಿಸಿದರು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳ ಅಣ್ಣಿಗೇರಿ. ಇಲ್ಲಿರುವ ಅಮೃತೇಶ್ವರ ದೇವಾಲಯವು ೧೦೫೦ರಲ್ಲಿ ಕಟ್ಟಲ್ಪಟ್ಟಿದ್ದು ೭೬ ಕಂಬಗಳಿಂದ ಕೂಡಿದ ದ್ರಾವಿಡ ಶೈಲಿಯಲ್ಲಿರುವ ದೇವಸ್ಥಾನ. ಇದೇ ಮುಂದೆ ೧೧೧೨ರಲ್ಲಿ ಇಟಗಿಯಲ್ಲಿರುವ ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗುವ ಮಹಾದೇವ ದೇವಸ್ಥಾನಕ್ಕೆ ಸ್ಫೂರ್ತಿಯಾಯಿತೆಂದು ಹೇಳಲಾಗುತ್ತದೆ. |
ಜನಗಣತಿ |
ಬದಲಾಯಿಸಿ |
ಅಣ್ಣಿಗೇರಿ ಪುರಸಭೆಯು 2001 ರ ಜನಗಣತಿಯ ಪ್ರಕಾರ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 25,709 ಜನಸಂಖ್ಯೆಯನ್ನು ಹೊಂದಿರುತ್ತದೆ. |
ದೇವಸ್ಥಾನಗಳು |
ಬದಲಾಯಿಸಿ |
ಅಣ್ಣಿಗೇರಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ಅಮೃತೇಶ್ವರ ದೇವಸ್ಥಾನವಿದೆ. |
638 ವರ್ಷ ಹಳೆಯ ತಲೆಬುರುಡೆ |
ಬದಲಾಯಿಸಿ |
638 ವರ್ಷ ಹಳೆಯ ತಲೆಬುರುಡೆ ಸಿಕ್ಕಿದ್ದರಿಂದ ಪುರಾತತ್ವ ಇಲಾಖೆಗೆ ಒಳಪಡುತ್ತದೆ.638 ವರ್ಷ ಹಳೆಯ ತಲೆಬುರುಡೆ |
Last edited ೩ years ago by Shreekant.mishrikoti |
ವಿಕಿಪೀಡಿಯ |
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. |
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ |
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಅನ್ನದಾನಯ್ಯ ಪುರಾಣಿಕ |
ಭಾಷೆ |
Download PDF |
ವೀಕ್ಷಿಸಿ |
ಸಂಪಾದಿಸಿ |
ಅನ್ನದಾನಯ್ಯ ಪುರಾಣಿಕರವರು(ಜನನ:೧೯೨೮) ಕನ್ನಡದ ಹಿರಿಯ ಸಾಹಿತಿಗಳಲ್ಲೊಬ್ಬರು ಮತ್ತು ಆಧುನಿಕ ವಚನಕಾರರಲ್ಲೊಬ್ಬರು. ಇವರು ಮದ್ದೂರಿನಲ್ಲಿ ನೆಡೆದ ಪ್ರಪ್ರಥಮ ಅಖಿಲ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡ, ಕರ್ನಾಟಕದ ನಾಡು-ನುಡಿಗಾಗಿ ಸುಮಾರು ಆರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯಹೋರಾಟ, ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅನ್ನದಾನಯ್ಯ ಪುರಾಣಿಕರ ನಾಯಕತ್ವವನ್ನು ಪ್ರತ್ಯಕ್ಷವಾಗಿ ನೋಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ ಮೊದಲಾದ ಗಣ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಅನ್ನದಾನಯ್ಯ ಪುರಾಣಿಕರಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿದೆ. ವರ್ಷ 2006, ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಹಿರಿಯ ನಾಯಕರಲ್ಲಿ ಒಬ್ಬರೆಂದು, ಇವರನ್ನು ಗೌರವಿಸಿ, ಕರ್ನಾಟಕ ರಾಜ್ಯ ಸರ್ಕಾರವು "ಏಕೀಕರಣ ಪ್ರಶಸ್ತಿ" ನೀಡಿದೆ. ಕರ್ನಾಟಕ ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವತಾವಾದಿ, ಗಾಂಧಿವಾದಿ, ಅನ್ನದಾನಯ್ಯ ಪುರಾಣಿಕರವರನ್ನು, ಕರ್ನಾಟಕ ರಾಜ್ಯಾದ್ಯಂತ ಜನರು, ಗೌರವ-ಅಭಿಮಾನದಿಂದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರೆಂದು ಕರೆಯುತ್ತಾರೆ.( ಧಾರವಾಡದ ಮುರುಘಾಮಠದಲ್ಲಿ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳು , ಸಾರ್ವಜನಿಕವಾಗಿ ಪ್ರಪ್ರಥಮವಾಗಿ "ಸಾಹಿತ್ಯರತ್ನ"ನೆಂದು ಗೌರವಿಸಿದರು.[೧] ಬೀದರ್ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಅನ್ನದಾನಯ್ಯನವರಿಗೆ ಪಟ್ಟದೇವರು ಪ್ರಶಸ್ತಿ , ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮಿಗಳವರ ೯೮ನೆ ಹುಟ್ಟುಹಬ್ಬದಂದು ಅನ್ನದಾನಯ್ಯನವರಿಗೆ "ಶರಣ ತಪಸ್ವಿ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಆಧುನಿಕ ವಚನ ರಚನಾ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ೨೦೦೬ನೆಯ ಸಾಲಿನ ರಮಣಶ್ರೀ ಶರಣ ಪ್ರಶಸ್ತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗು ರಮಣಶ್ರೀ ಪ್ರತಿಷ್ಠಾನಗಳು ಜೊತೆಯಾಗಿ ಅನ್ನದಾನಯ್ಯ ಪುರಾಣಿಕರಿಗೆ ನೀಡಿವೆ. |
ಅನ್ನದಾನಯ್ಯ ಪುರಾಣಿಕ |
ಜನನ |
ಮಾರ್ಚ್ ೮, ೧೯೨೮ |
ಅಕ್ಟೋಬರ್ ೨೦, ೨೦೧೫ |
ದ್ಯಾಂಪುರ, ಕೊಪ್ಪಳ |
ಮರಣ |
೨೦೧೫ |
ನಾಗರಿಕತೆ |
ಭಾರತೀಯ |
ವೃತ್ತಿ(ಗಳು) |
ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ |
Organization(s) |
ಅಖಿಲ ಭಾರತ ಬಸವ ಸಮಿತಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ |
Known for |
ಕರ್ನಾಟಕ ಏಕೀಕರಣ ಚಳುವಳಿ |
ಪೋಷಕs |
ಕಲ್ಲಿನಾಥ ಶಾಸ್ತ್ರೀ ಪುರಾಣಿಕ (father) |
ದಾನಮ್ಮ (mother) |
ಪರಿವಿಡಿ |
ಬಾಲ್ಯ ಮತ್ತು ಶಿಕ್ಷಣ |
ಬದಲಾಯಿಸಿ |
ಮಾರ್ಚ್ ೮, ೧೯೨೮ರಲ್ಲಿ, ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ದ್ಯಾಂಪುರವೆಂಬ ಗ್ರಾಮದಲ್ಲಿ ಇವರು ಜನಸಿದರು. ಇವರ ತಂದೆ ಕವಿರತ್ನ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಮತ್ತು ತಾಯಿ ದಾನಮ್ಮ. ಸಿದ್ದಯ್ಯ ಪುರಾಣಿಕ ಮತ್ತು ಬಸವರಾಜ ಪುರಾಣಿಕ ಇವರ ಸಹೋದರರಾಗಿದ್ದಾರೆ. ಶಾಲಾ ಶಿಕ್ಷಣವನ್ನು ಕುಕನೂರು ಮತ್ತು ಕೊಪ್ಪಳದಲ್ಲಿ ಮತ್ತು ಬಿ.ಕಾಂ ಪದವಿಯನ್ನು ಧಾರವಾಡದಲ್ಲಿ ಮತ್ತು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ. |
ಸಾಹಿತ್ಯ |
ಬದಲಾಯಿಸಿ |
ಅನ್ನದಾನಯ್ಯ ಪುರಾಣಿಕರು ವಚನ ಸಾಹಿತ್ಯ, ಸಂಶೋಧನೆ, ನ್ಯಾಯಾಂಗ ಮೊದಲಾದ ಪ್ರಕಾರಗಳಿಗೆ ಸೇರಿದ ಸುಮಾರು ೩೦ ಮೌಲಿಕ ಕೃತಿಗಳನ್ನು, ಹಲವಾರು ಲೇಖನಗಳನ್ನು ಮತ್ತು ಸುಮಾರು ೨೦೦೦ ವಚನಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ ಮತ್ತು ಅನೇಕ ಗ್ರಂಥಗಳ ಸಂಪಾದನೆ ಮಾಡಿದ್ದಾರೆ. ಇವರ ಪ್ರಮುಖ ಕೃತಿಗಳು ಹೀಗಿವೆ: ೧) ಶರಣು ಸ್ವಾಮಿ ೨) ಭಗೀರಥ (ಭಗೀರಥನ ಚರಿತ್ರೆ, ಆತನ ಬಗ್ಗೆ ಸಂಶೋಧನೆ) ೩) ಚೆನ್ನಬಸವ ಸಾಹಿತ್ಯ (ಚೆನ್ನಬಸವಣ್ಣನವರ ಕೃತಿಗಳ ಕುರಿತು ಪ್ರಥಮ ಪ್ರಕಟಣೆ) ೪) ವಚನ ಪ್ರಕಾಶ ೫) ವಚನ ಮಂದಾರ ೬) ವಚನ ದೀಪ್ತಿ ೭) ವಚನ ಸಂಗಮ ೮) ಷಟಸ್ಥಳಬ್ರಹ್ಮಿ ಚೆನ್ನಬಸವಣ್ಣ (ಚೆನ್ನಬಸವಣ್ಣನ ಜೀವನ-ಸಾಧನೆ) ೯) ಕರ್ನಾಟಕ ಸಹಕಾರ ಸಂಘಗಳ ಕಾನೂನು ೧೦)"ಪುರುಷ ಸಿಂಹ" ಸರ್ದಾರ ವಲಭಬಾಯಿ ಪಟೇಲ್ ೧೧)ಭಗತ್ ಸಿಂಗ್ ೧೨)ನೀತಿವಂತ ನ್ಯಾಯವಾದಿ (ಆತ್ಮ ಕಥನ) 13)ನ್ಯಾಯ ದರುಶನ ( ನ್ಯಾಯ ಶಾಸ್ತ್ರದ ಸಾಮಾನ್ಯ ಪರಿಚಯ) 14)ವಚನ ಸೌರಭ 15)ಷಟ್ ಸ್ಥಲ ಧರ್ಮಸಾರ ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ (೧೯೬೦-೬೩), ಕನ್ನಡ ನುಡಿ ಮಾಸ ಪತ್ರಿಕೆ ಮತ್ತು ನ್ಯಾಯ ದರ್ಶನ ಪತ್ರಿಕೆಗಳ ಸಂಪಾದಕರಾಗಿ ಇವರು ಕೆಲಸ ಮಾಡಿದ್ದಾರೆ. ಸಹಜೀವನ ಪ್ರಕಾಶನ, ಶ್ರೀ ಸಿದ್ಧಲಿಂಗ ಪ್ರಕಾಶನವೆಂಬ ಎರಡು ಪ್ರಕಾಶನ ಸಂಸ್ಥೆಯ ಪ್ರಕಾಶಕರಾಗಿ, ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಥಮ ಕನ್ನಡ ನಿಘಂಟು ಪ್ರಕಟಣೆ ( ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ) , ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ರಣಾಲಯ, ಭಾತಂಬ್ರಾ ಮೊದಲಾದ ಕಡೆ ಪ್ರಾರಂಭವಾದ ಗಡಿ ನಾಡ ಕನ್ನಡ ಸಾಹಿತ್ಯ ಸಮ್ಮೇಳನಗಳ ಪರಂಪರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಶಾಶ್ವತವಾಗಿ ವಾರ್ಷಿಕ ಅನುದಾನ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಹೀಗೆ ಹಲವಾರು ಕೆಲಸಗಳನ್ನು ಇವರು ಪರಿಷತ್ತಿನ ಕಾರ್ಯದರ್ಶಿಯಾಗಿ(೧೯೬೦-೬೩) ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ(೧೯೬೪-೬೮) ಮಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಉತ್ತಮ ಪಡಿಸಿದರು. ಕರ್ನಾಟಕ ಭಾಷಾ ಆಯೋಗದ ಸದಸ್ಯರಾಗಿ (೧೯೬೬-೬೯) ಮತ್ತು ಕರ್ನಾಟಕ ಗೆಝೆಟಿಯರ್ ಸಂಪಾದಕ ಮಂಡಳಿಯ ಸದಸ್ಯರಾಗಿ ( ೧೯೭೧-೧೯೯೩) ಕೆಲಸ ಮಾಡಿದ್ದಾರೆ. ಕರ್ನಾಟಕದ ಜಿಲ್ಲೆಗಳ ಗೆಝೆಟಿಯರ್ ಗಳ ಸಂಪಾದನೆ ಮತ್ತು ಪ್ರಕಟಣೆ ( ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ) ಇವರ ಮುಖ್ಯವಾದ ಕಾರ್ಯಗಳಲ್ಲೊಂದಾಗಿದೆ. |
ಸಂಘ ಸಂಸ್ಥೆಗಳು |
ಬದಲಾಯಿಸಿ |
ಅನ್ನದಾನಯ್ಯ ಪುರಾಣಿಕರು ಅನೇಕ ಜಾತ್ಯಾತೀತ ಸಂಘ-ಸಂಸ್ಥೆಗಳ ಸ್ಥಾಪನೆ ಮಾಡಿದ್ದಾರೆ. ಬಸವೇಶ್ವರರ 8ನೆ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದಾಗ ಬಸವ ಕಲ್ಯಾಣದಿಂದ ಹಂಪೆಯವರೆಗೆ ನೆಡೆದ ಪಾದಯಾತ್ರೆಯ ನೇತ್ರತ್ವ ವಹಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬಸವೇಶ್ವರ ಅಂಚೆ ಚೀಟಿ ಬಿಡುಗಡೆಗಾಗಿ ಬಿ.ಡಿ.ಜತ್ತಿಯವರೊಡನೆ ಕೆಲಸ ಮಾಡಿದ್ದಾರೆ. ಇಂದು ನಾಡಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಗಿರುವ ಅಖಿಲ ಭಾರತ ಬಸವ ಸಮಿತಿಯಲ್ಲಿ, ಸ್ಥಾಪಕ ಧರ್ಮದರ್ಶಿಯಾಗಿದ್ದಾರೆ ಮತ್ತು ೨೭ ವರ್ಷ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ಧಾರೆ. ಪ್ರಪಥಮವಾಗಿ ರಾಜ್ಯದ ವಿದ್ಯಾರ್ಥಿಗಳನ್ನು ಸಂಘಟಿಸಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು ಸ್ಥಾಪಿಸಿ, ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಸಾಹಿತ್ಯ ಸಂವರ್ಧಕ ಟ್ರಸ್ಟ್ ನ ಧರ್ಮದರ್ಶಿಯಾಗಿದ್ದಾರೆ. ಶೇಷಾದ್ರಿಪುರ ಶಿಕ್ಷಣ ದತ್ತಿ, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿ ಮತ್ತು ಅಲ್ಲಿ ಸಂಶೋಧನೆ-ಪ್ರಕಟಣೆ-ಶಿಕ್ಷಣ ಸಮಿತಿ , ಜಯನಗರ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ, ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. |
ನ್ಯಾಯಾಂಗ |
ಬದಲಾಯಿಸಿ |