text
stringlengths
0
2.67k
ಬದಲಾಯಿಸಿ
ತಮಿಳಿನಲ್ಲಿ ಅಮರಾವತಿ ಅಣೆಕಟ್ಟು Archived 2018-01-16 ವೇಬ್ಯಾಕ್ ಮೆಷಿನ್ ನಲ್ಲಿ.
Last edited ೧ year ago by InternetArchiveBot
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಆಲಮಟ್ಟಿ ಆಣೆಕಟ್ಟು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
ಆಲಮಟ್ಟಿ ಅಣೆಕಟ್ಟು
ಸ್ಥಳ
ಆಲಮಟ್ಟಿ, ನಿಡಗುಂದಿ ತಾಲ್ಲೂಕು, ವಿಜಯಪುರ ಜಿಲ್ಲೆ
ಅಕ್ಷಾಂಶ ರೇಖಾಂಶ
16.331°N 75.888°E
ಉದ್ಘಾಟನಾ ದಿನಾಂಕ
July 2005
ತಯಾರಿಕೆಯ ವೆಚ್ಚ
Rs. 5.20 billion
Operator(s)
ಕರ್ನಾಟಕ ವಿದ್ಯುತ್ ನಿಗಮ
Dam and spillways
ಇಂಪೌಂಡ್ಸ್
ಕೃಷ್ಣಾ ನದಿ
ಎತ್ತರ
52.25 m
ಉದ್ದ
1565.15 m
Reservoir
ಒಟ್ಟು ಸಾಮರ್ಥ್ಯ
130 Tmcft at 519 m MSL
ಸಂಗ್ರಹಣಾ ಪ್ರದೇಶ
33,375 ಚದರ ಕಿ.ಮೀ
Surface area
24,230 ಹೆಕ್ಟೇರ್ಗಳು
ಆಲಮಟ್ಟಿ ಆಣೆಕಟ್ಟು
ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು
ಬೋಟಿಂಗ್
ರಾಕ್ ಉದ್ಯಾನವನದ ಹೆಬ್ಬಾಗಿಲು
ಉದ್ಯಾನವನದ ನೋಟ
ಪರಿವಿಡಿ
ಪೀಠಿಕೆ
ಬದಲಾಯಿಸಿ
ಆಲಮಟ್ಟಿ ಆಣೆಕಟ್ಟು(ಲಾಲ ಬಹಾದ್ದೂರ ಶಾಸ್ತ್ರಿ ಸಾಗರ)ನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲುಕಿನಲ್ಲಿ ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ft (೨೮೫೮.೬೫ )ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.
ವಿವಿಧೋದ್ದೇಶ ಯೋಜನೆ
ಬದಲಾಯಿಸಿ
ಆಲಮಟ್ಟಿ ಅಣೆಕಟ್ಟು ಕೃಷ್ಣಾನದಿಗೆ ಅಡ್ಡಲಾಗಿರುವ ಕಟ್ಟಲಾಗಿರುವ ಒಂದು ದೊಡ್ಡ ನೀರಾವರಿ ಮತ್ತು ವಿದ್ಯುತ್ ಯೋಜನೆ. ಇದು ಕರ್ನಾಟಕದ ಉತ್ತರದಲ್ಲಿರುವ ಬಾಗಲಕೋಟೆ , ವಿಜಯಪುರ ಜಿಲ್ಲೆಗಳ ಅಂಚಿನಲ್ಲಿರುವ ಕೃಷ್ಣಾ -ಮೇಲುಭಾಗದ (ಅಪ್ಪರ್-ಕೃಷ್ಣಾ) ಯೋಜನೆ , ವಿಜಯಪುರ ಜಿಲ್ಲೆಯಲ್ಲಿದೆ. ಇದು (ಅಪ್ಪರ್-ಕೃಷ್ಣಾ) ಯೋಜನೆಯಲ್ಲಿ ಪ್ರಮುಖವಾದ ಅಣೆಕಟ್ಟು.
ಈ ಅಣೆಕಟ್ಟಿ ಜಲವಿದ್ಯತ್ ಯೋಜನೆಯಳ್ಲಿ ೨೯೦ ಮೆಗಾ ವ್ಯಾಟ್ (ಯೂನಿಟ್) ವಿದ್ಯತ್ ಉತ್ಪತ್ತಿಯಾಗುತ್ತದೆ; ಉತ್ಪದನಾ ಗುರಿ /ಸಾಮರ್ಥ್ಯ - ೫೬೦ ಎಮ್ ಯು -ಜಿಡಬ್ಲಯು) ಇದರಲ್ಲಿ ಲಂಬ ಕಪ್ಲಾನ್ ಟರ್ಬೈನ್ ಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡಲಗುತ್ತದೆ. ಅಣೆಕಟ್ಟೆಯ ಬಲಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
ಇದರಲ್ಲಿ ೫೫ಮೆ.ವ್ಯಾ. ನ ಐದು ಜನರೇಟರುಗಳೂ ,೧೫ ಮೆವ್ಯಾ.ನ ಒಂದು ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಕರ್ನಾಟಕದ ನಾರಾಯಣಪುರ ಜಲಾಶಯಕ್ಕೆ ಹೋಗುತ್ತದೆ.
ವೆಚ್ಚ
ಬದಲಾಯಿಸಿ
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃಭಾಜನಿನಿ), ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಯು.ಕೆ.ಪಿ) ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994 ರ ಆಗಸ್ಟ್ 19 ರಂದು ನಿಗಮಗಳ ಕಾಯ್ದೆ 1956 ರ ಅನುಸಾರ ಪ್ರಾರಂಭಿಸಲಾಗಿದೆ.
ಈ ನಿಗಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಳಗಿರುವ ಎಲ್ಲಾ ನೀರಾವರಿ ಯೋಜನೆಗಳ ರಚನಾ ಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾರ್ಯಚರಣೆ ಮತ್ತು ನಿರ್ವಹಣೆಯ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆದು ಕೃಷ್ಣಾ ಮೇಲ್ದಂಡೆ ಯೋಜನೆಯ ನಿರ್ವಹಣೆ ಮಾಡಬೇಕಾಗಿದೆ.
ಈ ಅಣೆ ಕಟ್ಟು ಮೊದಲು ಆರಂಭದಲ್ಲಿ (೧೯೬೪) ೧೪೭೦ ಕೋಟಿರೂಪಾಯಿಗಳಯೋಜನೆಯಾಗಿತ್ತು ; ಇದನ್ನು ಕರ್ನಾಟಕದ ಪವರ್ ಕಾರ್ಪೋರೇಶನ್ ಲಿ. ಇದರ ಮೇಲುಸ್ತುವಾರಿಗೆ ವಹಿಸಿದಾಗ ಅದು ಮೂಲ ಯೋಜನೆಗಿಂತ ಶೇಕಡಾ ೫೦ ರಷ್ಟು ಯೋಜನಾ ವೆಚ್ಚವನ್ನು ೬೭೪ ಕೋಟಿಗೆ ಕಡಿತ ಗೊಳಿಸಿತು. ನಂತರ ಅದನ್ನು ಇನ್ನೂ ಕಡಿತಗೊಳಿಸಿ ರೂ.೫೨೦ ಕೋಟಿಗೇ ,ಕೇವಲ ೪೦ ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಗಿಸಿತು.
ಆಂಧ್ರಕ್ಕೂ ಕರ್ನಾಟಕಕ್ಕೂ ಈ ಅಣೆ ಕಟ್ಟನ ನೀರಿನ ಮತ್ತು ಎತ್ತರದ ವಿಚಾರದಲ್ಲಿ ವಿವಾದ ಉಂಟಾಗಿ, ಆಲಮಟ್ಟಿ ಅಣೆಕಟ್ಟಿನ ಎತ್ತರವು ಸಮುದ್ರ ಮಟ್ಟದಿಂದ ೫೧೯ ಮೀಟರಿಗೆ (1705.3272 ಅಡಿ) ಸುಪ್ರೀಮ ಕೋರ್ಟಿನ ಆಜ್ಞೆಯಂತೆ ನಿಗದಿಯಾಗಿತ್ತು.೩೦೯೧.ಸಿ ಅಡಿ ನೀರು ಸಂಗ್ರಹವಾಗುವುದು.
ಈ ಅಣೆಕಟ್ಟು ವಿಜಯಪುರ ಜಿಲ್ಲೆಯಲ್ಲಿದ್ದರೂ ವಿಜಯಪುರ ಜಿಲ್ಲೆಯದಕ್ಕಿಂತಲೂ ಬಾಗಲಕೋಟೆ ಜಿಲ್ಲೆಯ ಬಹಳಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ. ಮುಳುಗಡೆಯಿಂದ ನೊಂದ ಜನರಿಗೆ ಇನ್ನೂ ಅನೇಕರಿಗೆ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ.
ವಿವಾದ ಮತ್ತು ನೀರು ಹಂಚಿಕೆ
ಬದಲಾಯಿಸಿ
ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಹಂಚಿಕೆ ಬಗ್ಗೆ ಆಂಧ್ರ , ಕರ್ನಾಟಕ, ಮಹಾರಾಷ್ಟ್ರಗಳನಡುವೆ ವಿವಾದ ಬಗೆಹರಿಸಲು ಸುಪ್ರೀಮ್ ಕೋಟಿ೯ಗೆ ಈ ಮೂರೂ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು.
ಸುಪ್ರೀಮ್ ಕೋರ್ಟಿನಲ್ಲಿ ವಾದ ವಿವಾದ ನಡೆದು , ಆಂಧ್ರ, ಕರ್ನಾಟಕ, ಮಹಾರಾಷ್ತ್ರ ಗಳ ನೀರಿನ ಹಂಚಿಕೆಯ ವಿವಾದ ಪರಿಹಾರ ಕಂಡುಕೊಳ್ಳಲು ಸುಪ್ರೀಮ್ ಕೋರ್ಟ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ಟ್ತಿಬ್ಯೂನಲ್ ( ಕೃಷ್ಣಾ ನ್ಯಾಯ ಮಂಡಳಿ) ರಚಿಸಲಾಯಿತು.ಅದು ತನ್ನ ೧ ಮತ್ತು ೨ರ ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ ೯೧೧ (911) ಟಿಎಮ್.ಸಿ ಅಡಿ ನೀರು ಹಂಚಿಕೆ ಆಗಿತ್ತು. ಅದು ನವೆಂಬರ್ ೨೯;೨೦೧೩ ರಂದು ಅಂತಿಮ ತೀರ್ಪು ನೀಡಿತು. ಜಲಾಶಯದ ಒಟ್ಟು ಸಂಗ್ರಹ ೨೫೭೮ ಟಿ.ಎಮ್. ಸಿ. ಅಡಿ, ನೀರನ್ನು ಮಳೆಯ ಶೇ.೭೫ರ ಆಧಾರದಮೆಲೆ ಮೂರೂ ರಾಜ್ಯಗಳಿಗೆ ಹಂಚಿಕೆ ಮಾಡಿತು. ಇಷ್ಟು ನೀರನ್ನು ಹಂಚಿಕೆ ಮಾಡಿದ ಮೇಲೂ ಹೆಚ್ಚುವರಿಯಾಗಿ ೫೧೩ ಟಿ,ಎಮ್,ಸಿ.ಅಡಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ.ಈ ಹೆಚ್ಚುವರಿ ನೀರಿನ ಬಗ್ಗೆ ಸೂಕ್ತ ಕಾಲದಲ್ಲಿ ಪುನಹ ಹಂಚಿಕೆ ಮಾಡಲು ಸೂಕ್ತ ವೇದಿಕೆಯಲ್ಲಿ ಮೂರು ರಾಜ್ಯಗಳ ಕೇಳಿಕೊಳ್ಳಬಹುದೆಂದು ಹೇಳಿದೆ. (ಕೃಷ್ಣಾ ಮೊದಲನೇ ನ್ಯಾಯ ಮಂಡಳಿ ಕರ್ನಾಟಕಕ್ಕೆ ೭೩೪ ಟಿ.ಎಮ್.ಸಿ.ಅಡಿ ನೀರು ಕೊಟ್ಟಿತ್ತು ).
ದಿ.೨ - ೧೧- ೨೦೧೩(2-11-2013) ರ ತೀರ್ಪು
ಈಗ ಕೃಷ್ಣಾನ್ಯಾಯಮಂಡಳಿ ತೀರ್ಪು ಕರ್ನಾಟಕಕ್ಕೆ ೯೦೭(907) ಟಿ.ಎಮ್,ಸಿ.ಅಡಿ ;
ಮಹಾರಾಷ್ಟ್ರಕ್ಕೆ --- ೬೬೬ (666) ಟಿ.ಎಮ. ಸಿ.ಅಡಿ ;
ಆಂಧ್ರಕ್ಕೆ --- ೧೦೦೫ (1005) ,ಇಎಮ.ಸ ಸಿ,ಅಡಿ ನೀರನ್ನು ಹಂಚಿಕೆ ಮಾಡಿದೆ.
(ಒಟ್ಟು ಹಂಚಿಕೆ ಮಾಡಿದ ನೀರು ೨೫೭೮ ಟಿ,ಎಮ್,ಸಿ. ಅಡಿ; ಅದಕ್ಕೂ ಹೆಚ್ಚುವರಿ ಉಳಿಯುವ ನೀರು ೫೧೩ ಟಿ,ಎಮ್.ಸಿ ಅಡಿ ಅಂದರೆ ಸಂಗ್ರಹವಾಗಬಹುದಾದ (2578+503) =3091ನೀರು ೨೫೭೮+೫೧೩ = ೩೦೯೧ ಟಿ,ಎಮ್ ಸಿ ಅಡಿ ನೀರು ?).
ಆ ಮಂಡಳಿಯು, ದಿ. ೩೦-೧೨-೨೦೧೩ ರಂದು ಪುನಹ ಎತ್ತಿದ ಆಕ್ಷೇಪಕ್ಕೆ ಆಂದ್ರಕ್ಕೆ ೪ ಟಿ.ಎಮ್.ಸಿ ಅಡಿ ಹೆಚ್ಚು ಮಂಜೂರುಮಾಡಿ ಕೈತೊಳೆದು ಕೊಂಡಿದೆ.
ಆಂಧ್ರವು ಇಷ್ಟೆಲ್ಲಾ ತಕರಾರು ಮಾಡಲು ಕಾರಣ ಕರ್ನಾಟಕ ತನ್ನ ಪಾಲಿನ ನೀರನ್ನು ಪೂರ್ಣ ಉಪಯೋಗಿಸದೆ ಆಂದ್ರಕ್ಕೆ ಬಿಡುತ್ತಿದೆ ಅದನ್ನು ಅದು ಉಪಯೋಗಿಸಿಕೊಂಡು ಸಾವಿರಾರು ಎಕರೆ ಹೆಚ್ಚು ನೀರಾವರಿ ಬೇಸಾಯ ಮಾಡುತ್ತಿದೆ. ಅಲ್ಲದೆ ಮಳೆ ಹೆಚ್ಚಾದಾಗ ಬರುವ ನೀರನ್ನೂ ಉಪಯೋಗಿಸುತ್ತದೆ ಅಥವಾ ಸಮುದ್ರಕ್ಕೆ ಬಿಡುತ್ತದೆ. ಕನಾ೯ಟಕ ತನ್ನ ನೀರನ್ನು ಉಪಯೋಗಿಸಿಕೊಂಡರೆ ಅನಧಿಕೃತವಾಗಿ ಹೆಚ್ಚುವರಿ ನೀರಾವರಿ ಬೇಸಾಯ ಮಾಡುವ ಸಾವಿರಾರು ಎಕರೆ ಜಮೀನಿಗೆ ನೀರಿನ ಕೊರತೆ ಆಗುವುದೆಂಬ ಭಯದಿಂದ ಅದು ತಕರಾರುಮಾಡುತ್ತಿದೆ.
ಅಣೆಕಟ್ಟೆ ಎತ್ತರ
ಬದಲಾಯಿಸಿ
ಕೊನೆಗೆ ಜಲಾಶಯದ ಮಟ್ಟವನ್ನು 519. 6 (1705.33 ಅಡಿ) ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು (ಸಮುದ್ರ ಮಟ್ಟದಿಂದ ಎತ್ತರ ; 1705.//್ಠ/3272ಅಡಿ = 519.6 ಮೀ x1.094ಗಜ*3ಅಡಿ=1705.33 ಅಡಿ) ನ್ಯಾಯಂಗ ಸಮಿತಿ 29 ನವೆಂಬರ್ 2013 ರಲ್ಲಿ ತೀರ್ಮಾನ ಕೊಟ್ಟಿತು. ಆದರೆ ಆಂದ್ರವು ಅದನ್ನು ಪುನಹ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ವಿರೋಧಿಸಿತು. ಅಕಸ್ಮಾತ್ ಎತ್ತರಿಸಿದಲ್ಲಿ ತನಗೆ ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ 200 ಟಿ ಎಮ್ ಸಿ ನೀರಿನಲ್ಲಿ ಹೆಚ್ಚು ಭಾಗ ಕೊಡಬೇಕೆಂದು ಕೇಳಿತು . ಆದರೆ ನ್ಯಾಯ ಮಂಡಳಿ ಮಳೆಯ-ಸರಾಸರಿ ಶೇ. 65 ಅಂದಾಜು ಹಿಡಿದು ಹೀದೆ ನವೆಂಬರ್ 29, 2013 ರ ತೀರ್ಪಿನಲ್ಲಿ ಕೊಟ್ಟ 1005 ಟಿಎಮ್ ಸಿ ನೀರಿನ ಜೊತೆಗೆ ಆಂದ್ರಕ್ಕೆ 2 ರ ಐ-ತೀರ್ಪು ನೀಡಿ 4 ಟಿ ಎಮ್ ಸಿ ಯಷ್ಟು ಹೆಚ್ಚುವರಿ ನೀರು ಕೊಡಲು ತೀರ್ಮಾನ ಕೊಟ್ಟಿದೆ. ನಿಗದಿಮಾಡಿದೆ . ಅಣೆ ಕಟ್ಟೆ ಎತ್ತರಿಸಿದ ನಂತರ ಸಿಗವ- ಆ ಹೆಚ್ಚುವರಿ ನೀರನ್ನು ಕರ್ನಾಟಕವೇ ಉಪಯೋಗಿಸಬಹುದು ಎಂದು ನಿರ್ಣಯಿಸಿದ್ದಾರೆ. (ಆಗಸ್ಟ್ 2013 ಕ್ಕೆ ಅದರಲ್ಲಿ 90.91 ಟಿ.ಎಮ್ ಸಿ ನೀರು ಸಂಗ್ರಹವಿರುವುದಾಗಿ ವರದಿಯಾಗಿದೆ. (ಇಂಗ್ಲಿಷ್ ವಿಕಿ- ಆಲಮಟ್ಟಿ ಜಲಾಶಯ) ಒಟ್ಟು ಧಾಮಾಶಾ 200 ಟಿಎಮ್ ಸಿ ನೀರು ಅದರಲ್ಲಿ ಸಂಗ್ರಹವಾಗುವುದಾಗಿ ಹೇಳಲಾಗಿದೆ.)
ಆಲಮಟ್ಟಿಯ ಗರಿಷ್ಟ ಮಟ್ಟ 519.6 ಮೀಟರ್ ಆದರೆ ಅದರ ಬಳಕೆ ಕನಿಷ್ಟ ಮಟ್ಟ(ಡೆಡ್ ಸ್ಟೋರೇಜ್ ) 506.87 ಮೀಟರ್. ಇದಕ್ಕಿಂತ ಕಡಿಮೆಯಾದಲ್ಲಿ ಕಾಲುವೆಗೆ ನೀರು ಬಿಡಲು ಆಗುವುದಿಲ್ಲ. ಈ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಅಣೆಕಟ್ಟು ಸುಮಾರು 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವುದು .(ಆಧಾರ:- ಕೃಷ್ಣಾ ಭಾಗ್ಯ ಜಲನಿಗಮದ ಪತ್ರಿಕಾ ಹೇಳಿಕೆ 23-4-2014—ಪ್ರಜಾವಾಣಿ ವರದಿ)
ನೀರಾವರಿ ಪ್ರದೇಶ
ಬದಲಾಯಿಸಿ
ಅಪ್ಪರ್ ಕೃಷ್ಣಾ ವಿವಿದೋದ್ದೇಶ ಯೋಜನೆಯಲ್ಲಿ ಮುಖ್ಯವಾಗಿ ಎರಡು ಅಣೆಕಟ್ಟುಗಳು ಘಟಪ್ರಭಾ ನದಿ, ಕೃಷ್ಣಾ ನದಿಗಳು ಸಂಗಮದ ಹತ್ತಿರ ಕಟ್ಟಲಾಗಿದೆ. ಕೆಳ ಭಾಗದ ಆಂದ್ರದಲ್ಲಿ ಮಲಪ್ರಭಾ ನದಿ ಕೃಷ್ಣಾ ನದಿ ಸೇರುವಲ್ಲಿ ಕಟ್ಟಲಾಗಿದೆ.
ಈಯೋಜನೆಯು ಎರಡು -ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಯೋಜನೆ ಯಾಗಿತ್ತು.. ಮೊದಲ ಹಂತದಲ್ಲಿ, ಈ ಯೋಜನೆಯಿಂದ ೧೧೯ ಟಿ.ಎಮ್,ಸಿ ನೀರನ್ನು ಉಪಯೋಗಿಸಿಕೊಂಡು ೪,೨೫,೦೦೦ ಹೆಕ್ಟೇರು ಜಮೀನನ್ನು ನೀರಾವರಿಕೃಷಿಗೆ ಒಳಪಡಿಸುವುದು; ಎರಡನೇ ಹಂತದ ಯೋಜನೆಯಲ್ಲಿ , ೫೪ ಟಿಎಮ್.ಸಿ. ನೀರನ್ನು ಉಪಯೋಗಿಸಿಕೊಂಡು ೧,೯೭,೧೨೦ ಹೆಕ್ಟೇರು ಜಮೀನಿಗೆ ನೀರು ಒದಗಿಸುವುದು.
೧ ನೇ ಮತ್ತು ೨ ನೇ ಹಂತದ ಈ ನೀರಾವರಿ ಯೋಜನೆಯಿಂದ , ಬರದ ನಾಡು /ಜಿಲ್ಲೆ ಗಳಾದ ಉತ್ತರ ಕರ್ನಾಟಕದ, ಗುಲ್ಬರ್ಗಾ , ಯಾದಗಿರಿ, ರಾಯಚೂರು, ಬೀಜಾಪುರ, ಬಾಗಿಲಕೋಟೆ ಈ ಪ್ರದೇಶಗಳನ್ನು ನೀರಾವರಿ ಯೋಜನೆ ಗೆ ಒಳಪಡಿಸುವುದು. ಇದಕ್ಕಾಗಿ ಮೊದಲ ೧ ಮತ್ತು ೨ನೇ ಹಂತದ ಯೋಜನೆಗಳು ಪೂರ್ಣಗೊಂಡು ೬.೦೮ ಲಕ್ಷ ಹೆಕ್ಟೇರು ಪ್ರದೇಶ ನೀರಾವರಿ ಪಡೆಯಲು ಸಿದ್ಧವಾಗಿದೆ. ಇದಕ್ಕಾಗಿ ೧೭೩ ಟಿ.ಎಮ್.ಸಿ ನೀರು ಉಪಯೋಗಿಸಲು ಸಿದ್ಧವಾಗಿದೆ . (೧ ಹೆಕ್ಟೇರು = ೨.೫ ಎಕರೆ.)
ದಿ. ೩೦-೧೨-೨೦೧೦ ರಲ್ಲಿ ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯ ಮಂಡಳಿ-೨, ಆಂಧ್ರ, ಕರ್ನಾಟಕ. ಮಹಾರಾಷ್ತ್ರಗಳ ನಡುವೆ, ಹೆಚ್ಚುವರಿ ನೀರನ್ನು, ಈ ರೀತಿ ಹಂಚಿಕೆ ಮಾಡಿತು.
ಮಹಾರಾಷ್ರಕ್ಕೆ ೮೧ ಟಿ.ಎಮ್.ಸಿ. ; (ಮೀಟರ್)
ಕರ್ನಾಟಕಕ್ಕೆ ೧೭೭ ಟಿ,ಎಮ್,ಸಿ; (ಮೀಟರ್)
ಆಂಧ್ರ ಪ್ರದೇಶಕ್ಕೆ ೧೯೦ ಟಿಎಮ್ ಸಿ. ; (ಮೀಟರ್)
ಕರ್ನಾಟಕಕ್ಕೆ ಕೊಡಮಾಡಿದ ೧೭೭ ಟಿ.ಎಮ್.ಸಿ. (ಮೀಟರ್)ನೀರಿನಲ್ಲಿ ೧೩೦.೯೦ ಟಿಎಮ್ ಸಿ (ಮೀಟರ್)ಮೂರನೇಹಂತದ ಯೋಜನೆಯಿಂದ ದೊರಕುವ ಭಾಗ.
ಉದ್ಯಾನ ವನ-ಪ್ರೇಕ್ಷಣೀಯ ಸ್ಥಳ
ಬದಲಾಯಿಸಿ
ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ .ಅದರಲ್ಲಿ ದೋಣಿ ವಿಹಾರ (ಬೋಟಿಂಗ್), ಸಂಗೀತ ಕಾರಂಜಿ., ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ
ಅಣೆಕಟ್ಟೆ ಎತ್ತರದ ಬಗೆಗೆ 2014 ರ ಬೆಳವಣಿಗೆ