text
stringlengths
0
2.67k
ಬದಲಾಯಿಸಿ
ಜಲಾಶಯದ ಮಟ್ಟವನ್ನು 519. 6 (1705.33 ಅಡಿ)ಸಮುದ್ರ ಮಟ್ಟದಿಂದ ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು ನ್ಯಾಯಂಗ ಸಮಿತಿ ೨೯ ನವೆಂಬರ್ ೨೦೧೩ ರಲ್ಲಿ ತೀರ್ಮಾನ ಕೊಟ್ಟಿದ್ದು ಸರಿಯಷ್ಟೆ.
ಆದರೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮತ್ತೆ 22 ಗ್ರಾಮಗಳು ಮುಳುಗಡೆಯಾಗಲಿವೆ. ‘ನಾರ್ವೆ’(ಮಾದರಿ) ತಡೆಗೋಡೆ ನಿರ್ಮಿಸುವ ಮೂಲಕ ಈ ಪೈಕಿ 12 ಗ್ರಾಮಗಳನ್ನು ರಕ್ಷಿಸಿ, ಮುಳುಗಡೆ ವ್ಯಾಪ್ತಿಯನ್ನು ತಗ್ಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗ ಮುಂದಾಗಿದೆ.
ಆದರೆ ‘ಯಾವುದೇ ಕಾರಣಕ್ಕೂ ತಡೆಗೋಡೆ ಬೇಡ, ಎಲ್ಲ 22 ಹಳ್ಳಿಗಳನ್ನು ಮುಳುಗಡೆ ವ್ಯಾಪ್ತಿಗೆ ಸೇರಿಸಿ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ’ ಎಂಬುದು ಸಂತ್ರಸ್ತರ ಆಗ್ರಹ. ಅವರು ಈ ಕುರಿತು ಪುನರ್ವಸತಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಾರ್ವೆ ದೇಶದ ಮಾದರಿಯಂತೆ ತಡೆಗೋಡೆ ನಿರ್ಮಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಕಾರದೊಂದಿಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಆಯುಕ್ತ ತಿಳಿಸಿದರು.
ತಡೆಗೋಡೆ ನಿರ್ಮಾಣದಿಂದ ಆಲಮಟ್ಟಿ ಜಲಾಶಯದಲ್ಲಿ ರಾಜ್ಯದ ಪಾಲಿನ ನೀರಿನ ಸಂಗ್ರಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬಾಗಲಕೋಟೆ ಜಿಲ್ಲೆಯ ಗೋವಿಂದಕೊಪ್ಪ, ಗದ್ದನಕೇರಿ, ಉದಗಟ್ಟಿ, ಕಲಾದಗಿ, ಅಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್‌ಕೆ, ಹಿರೇಪಡಸಲಗಿ, ಕುಂಬಾರಹಳ್ಳ, ಸನಾಳ ಹಾಗೂ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮವನ್ನು ಹಿನ್ನೀರಿನಲ್ಲಿ ಮುಳುಗಡೆಯಾಗದಂತೆ ರಕ್ಷಿಸಬಹುದಾಗಿದೆ’ ಎಂದು ಅವರು ವಿವರಿಸಿದರು.
ಮನೆ, ಹೊಲ ಮುಳುಗಡೆಯಾಗುವುದಕ್ಕೆ ಸಂತ್ರಸ್ತರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ಅವಳಿ ಜಿಲ್ಲೆಯ 12 ಗ್ರಾಮಗಳ ಸಂತ್ರಸ್ತರು ‘ನಮ್ಮೂರನ್ನು ಹಿನ್ನೀರಿನಲ್ಲಿ ಮುಳುಗಿಸಿ, ಪರಿಹಾರ ನೀಡಿ....’ ಎಂದು ದುಂಬಾಲು ಬಿದ್ದಿರುವು ದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸಂತ್ರಸ್ತರ ಭಾವನೆ ಏನೇ ಇರಲಿ, ಮುಳುಗಡೆಯಾ ಗುವುದನ್ನು ತಪ್ಪಿಸಲು ಮತ್ತು ಯೋಜನಾ ವೆಚ್ಚ ತಗ್ಗಿಸಲು ಇರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ, ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ’ ಎಂದು ಸಚಿವ ಎಸ್‌.ಆರ್‌.ಪಾಟೀಲ ಅವರು ಪುನರ್ವಸತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಾಗಲಕೋಟೆ: ಬೃಹತ್‌ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹಿನ್ನೀರು ಗ್ರಾಮಗಳಿಗೆ ಮತ್ತು ಕೃಷಿಭೂಮಿಗೆ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ನಾರ್ವೆ ದೇಶದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಪ್ರಯೋಗ ನಡೆಯಿತು.
ಈ ಪ್ರಯೋಗ ಯಶಸ್ವಿಯಾದುದರಿಂದ ‘ನಾರ್ವೆ ತಡೆಗೋಡೆ’ ಮಾದರಿ ಎಲ್ಲೆಡೆ ಪ್ರಸಿದ್ಧಿಯಾಯಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಬೃಹತ್‌ ನೀರಾವರಿ ಯೋಜನೆಗಳಲ್ಲಿನ ಮುಳುಗಡೆ ಪ್ರಮಾಣ ತಗ್ಗಿಸಲು ‘ನಾರ್ವೆ ತಡೆಗೋಡೆ ಮಾದರಿ’ಯನ್ನು ಅಳವಡಿಸಿಕೊಳ್ಳುತ್ತಿವೆ’ ಎಂದು ಶಿವಯೋಗಿ ಕಳಸದ ತಿಳಿಸಿದರು.
ತಡೆಗೋಡೆ ನಿರ್ಮಿಸಿದರೆ ಲಾಭ:
12 ಹಳ್ಳಿಗಳ ಮುಳುಗಡೆ ತಡೆಯಬಹುದು
ಇದರಿಂದ ₨ 5600 ಕೋಟಿ ಉಳಿತಾಯ
5 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಯಲಿದೆ
47,500 ಜನರ ಸ್ಥಳಾಂತರ ತಪ್ಪಿಸಬಹುದು
12 ಪುನರ್ವಸತಿ ಕೇಂದ್ರ ನಿರ್ಮಾಣದ ಅಗತ್ಯ ಇರುವುದಿಲ್ಲ
ಪುನರ್ವಸತಿ ಕೇಂದ್ರಕ್ಕೆ ಬೇಕಾದ 2900 ಎಕರೆ ಭೂಮಿ ಉಳಿಯಲಿದೆ
೨೦೧೬ ರ ವರೆಗಿನ ಬೆಳವಣಿಗೆ
ಬದಲಾಯಿಸಿ
ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ.
ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ.
ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್‌ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ.
ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ.
ತೆಲಂಗಾಣಾ ಉದಯದ ನಂತರದ ಸಮಸ್ಯೆ
ಬದಲಾಯಿಸಿ
ಆಂಧ್ರ ಪ್ರದೇಶವು, ಆಂದ್ರ ಮತ್ತು ತೆಲಂಗಾಣಾ ಎಂದು ವಿಭಝಿತವಾದ ಮೇಲೆ ಕೃಷ್ಣಾನದಿನೀರು ಹಂಚಿಕೆ ಸಮಸ್ಯೆ ಎದುರಾಗಿ ಕೃಷ್ಣಾ ನದಿ ನ್ಯಾಯಾಧಿಕರಣದಮುಂದೆ ತೆಂಗಾಣಾ ಆಂದ್ರ ಗಳ ನೀರಿನ ಹಂಚಿಕೆಯ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ. ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ.
ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.[೧]
ನಿರಾಶ್ರತರ ಸಮಸ್ಯೆ
ಬದಲಾಯಿಸಿ
ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಕುಟುಂಬಗಳ ಪೈಕಿ ಐದರಿಂದ ಆರು ಸಾವಿರ ಜನರಿಗೆ ಎಡೆಹಳ್ಳಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಪರಿಹಾರ ಪಡೆದ ಬೀಳಗಿ ತಾಲ್ಲೂಕಿನ ಈ ಹಳ್ಳಿಯ ಎಷ್ಟೋ ಮಂದಿಗೆ ಈಗಲೂ ಹಕ್ಕುಪತ್ರಸಿಕ್ಕಿಲ್ಲ. ಹದಿನೆಂಟು ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರಿತ್ತೋ ಅಷ್ಟೇ ಜನ ಸಂತ್ರಸ್ತರ ಪಟ್ಟಿಯಲ್ಲಿದೆ. ಅವರು ಆಗ ಬಾಲಕರಾಗಿದ್ದವರು ಈಗ ಯುವಕರಾಗಿ, ಸಂಸಾರಗಳನ್ನು ಪಡೆದಿದ್ದಾರೆ. ಅವರ ಸಂಸಾರದಲ್ಲಿ ನಂತರ ಹುಟ್ಟಿದ ಎಷ್ಟೋ ಸದಸ್ಯರ ಹೆಸರು ಪಟ್ಟಿಯಲ್ಲಿ ಇಲ್ಲ. ಹಿಂದೆ ವಿಶಾಲ ಮನೆಗಳಲ್ಲಿ ಇದ್ದವರು ಈಗ ತಗಡಿನ ಪುನರ್ವಸತಿ ಮನೆಗಳಲ್ಲಿ ಇದ್ದಾರೆ.ಆದರೆ, ಮುಳುಗಡೆಯ ಕಷ್ಟ ಅವರಿಗೆಲ್ಲಅ ತಟ್ಟಿದೆ ಎನ್ನುತ್ತಾರೆ ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಹೋರಾಟದ ಸಮಿತಿ ಅಧ್ಯಕ್ಷ ಅದೃಶ್ಯಪ್ಪ, [೨][೩]
ಆಲಮಟ್ಟಿ ಉದ್ಯಾನವನದ ಚಿತ್ರಗಳು
ಬದಲಾಯಿಸಿ
ಟಿ.ಎಂ.ಸಿ
ಬದಲಾಯಿಸಿ
1 ಟಿ. ಎಮ್.ಸಿ. = 100 ಕೋಟಿ ಘನ ಮೀಟರ್ ಅಥವಾ ಗಜ ಅಥವಾ ಅಡಿ; ಟಿ. ಎಮ್.ಸಿ.ನಂತರ ಅದನ್ನು ಬರೆಯಬೇಕು.
1,000,000,000 ಘನ ಅಡಿ = 28,000,000 ಘನ ಮೀಟರ್ ; ಕರ್ನಾಟಕ ಭಾಗ್ಯ ನಿಗಮದ ಅಂತರ್ ಜಾಲ ತಾಣದಲ್ಲಿ ಹಂಚಿದ ನೀರಿನ ಪ್ರಮಾಣದ ಅಂಕೆ ಮುಂದೆ ಮೀ / ಅಡಿ ಬರೆದಿಲ್ಲ.; ಮೀಟರ್ ಎಂದು ಊಹಿಸಿಕೊಳ್ಳಬೇಕು.
There are 28,316,846,592 liters in 1 TMC of water.
Tmcft, TMC, tmc, or Tmc ft are abbreviations for 1,000,000,000 = 1 billion or one Thousand Million Cubic ft. It is a measurement used in referring to water volume in river flow or reservoirs.
1 Tmcft is therefore equal to: 28,316,846,592 liters
1,000,000,000 cubic ft or 28,000,000 m3
22,956.841139 acre feet
೧.-http://www.kbjnl.com/Upper-Krishna-Project
ನೋಡಿ
ಬದಲಾಯಿಸಿ
ಕರ್ನಾಟಕ
ತುಂಗಭದ್ರಾ ಅಣೆಕಟ್ಟು
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ
ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)
ಆಧಾರ
ಬದಲಾಯಿಸಿ
ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು;19 Oct, 2016
ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!;ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!;ಸದಾಶಿವ ಎಂ.ಎಸ್: 23 ಡಿಸೆಂಬರ್ 2018
ಈ ಹೊತ್ತಿಗೂ ಇವರೆಲ್ಲ ಶಾಪಗ್ರಸ್ತರು!: ಬೀದಿಗೆ ಬಿದ್ದ ಬದುಕು...ವಿಶಾಖ ಎನ್‌.: 23 ಡಿಸೆಂಬರ್ 2018,
ಹೊರ ಸಂಪರ್ಕ
ಬದಲಾಯಿಸಿ
೧. ಇಂಗ್ಲಿಷ್ ವಿಕಿ ಆಲಮಟ್ಟಿ ಡ್ಯಾಮ್
೨. ಸುದ್ದಿ ಮಾದ್ಯಮ -ಪ್ರಜಾವಾಣಿ ದಿ೩೦-೧೧-೨೦೧೩ ಮತ್ತು ೨೧-೧೨-೨೦೧೩
೩.http://www.kbjnl.com/Upper-Krishna-Project
೪.ಪ್ರಜಾವಾಣಿ ವಾರ್ತೆ/ 12/31/2014
೫.ಪ್ರಜಾವಾಣಿ ೨೪-೩-೨೦೧೬:[೧]
Almatti Dam ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
Last edited ೯ months ago by 2405:204:5282:9823:0:0:21D:F0B1
ವಿಕಿಪೀಡಿಯ
ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್
ವಿಕಿಪೀಡಿಯ
ವಿಕಿಪೀಡಿಯ ಅನ್ನು ಹುಡುಕಿ
[ಮರೆಮಾಡಲು]
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
ಕರ್ನಾಟಕದಲ್ಲಿ ಕೃಷಿ
ಸಮಸ್ಯೆಗಳು
ಭಾಷೆ
Download PDF
ವೀಕ್ಷಿಸಿ
ಸಂಪಾದಿಸಿ
== ಕರ್ನಾಟಕದಲ್ಲಿ ಕೃಷಿ ಭೂಮಿ ಸಮಸ್ಯೆ ==
12-ಜುಲೈ 2014
ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್‌ ಬಿತ್ತನೆ ಭೂಮಿ, ( ಮಳೆ ಕೊರತೆ ಕಾರಣ ೧೨-ಜುಲೈ ೨೦೧೪ ವರೆಗೆ 18.92 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ­ಯಾಗಿದೆ.)
ರಾಜ್ಯದಲ್ಲಿ 1.39 ಕೋಟಿ ಜಾನುವಾರುಗಳಿದ್ದು, (೧೨-೭-೨೦೧೪ ರಿಂದ.72.75 ಲಕ್ಷ ಟನ್‌ ಮೇವಿನ ಸಂಗ್ರಹ ಇದೆ. ಇದು 15 ವಾರ­ಗಳಿಗೆ ಸಾಕಾಗುತ್ತದೆ.)
‘ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ ,(೧೨-೭-೨೦೧೪ ಮಳೆ ಕೊರತೆಯಿಂದ ಸದ್ಯ 166 ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 254 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.)
3,554 ನೀರಾವರಿ ಕೆರೆಗಳಿವೆ, (೧೨-೭-೨೦೧೪ ಮಳೆ ಕೊರತೆ ಕಾರಣ ಎಂಟು ಮಾತ್ರ ತುಂಬಿವೆ. 159 ಕೆರೆಗಳು ಶೇ 50ರಷ್ಟು ಮತ್ತು 1,062 ಕೆರೆಗಳು ಶೇ 30ರಷ್ಟು ತುಂಬಿದ್ದರೆ, ಉಳಿದ ಉಳಿದ 2,328 ಕೆರೆಗಳು ಖಾಲಿಯಾ­ಗಿವೆ’
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ 115 ಟಿಎಂಸಿ ಇದ್ದು, ಪ್ರಸ್ತುತ 34 ಟಿಎಂಸಿ ಮಾತ್ರ ಲಭ್ಯವಿದೆ. ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಗರಿಷ್ಠ ಸಾಮರ್ಥ್ಯ 421 ಟಿಎಂಸಿ ಇದ್ದು, ಕೇವಲ 83 ಟಿಎಂಸಿ ನೀರು ಲಭ್ಯವಿದೆ.)
ರಾಜ್ಯದ ಎಲ್ಲಾ ಜಲಾಶಯಗಳ ಗರಿಷ್ಠ ಸಾಮರ್ಥ್ಯ 864 ಟಿಎಂಸಿ ಇದೆ, (ಕಳೆದ ವರ್ಷ ಜೂ.10ರಂದು 254 ಟಿಎಂಸಿ ಇತ್ತು. ಮಳೆ ಕೊರತೆ ಕಾರಣ ಜುಲೈ ೨೦೧೪ ,ಈ ವರ್ಷ 166 ಟಿಎಂಸಿ ಇದೆ. ಅಲ್ಲಿಗೆ 88 ಟಿಎಂಸಿ ನೀರಿನ ಕೊರತೆಯಿದೆ)
ರಾಜ್ಯದಲ್ಲಿ 59,25,551 ಎಕರೆ ಜಮೀನಿಗೆ ನೀರಾವರಿ ಒದಗಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.­ಪಾಟೀಲ ಹೇಳಿದ್ದಾರೆ.ವಿಧಾನಸಭೆಯಲ್ಲಿ ಸೋಮವಾರ ಕೆ.ಆರ್.ರಮೇಶ್‌ಕುಮಾರ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.(೨೮-೭-೨೦೧೪/೨೯-೭-೨೦೧೪ ಪ್ರಜಾವಾಣಿ)
ಪರಿವಿಡಿ